ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಲ ತೀರಿಸಲು ಆಸ್ತಿ ಅಡ ಇಟ್ಟ ಸೋನು ಸೂದ್

ಲಾಕ್‌ಡೌನ್ ಟೈಮ್‌ನಿಂದ ಆರ್ಥಿಕವಾಗಿ ಹಿಂದುಳಿದ ಸಾವಿರಾರು ಜನರಿಗೆ ಸಹಾಯ ಮಾಡಿ ಗುರುತಿಸಿಕೊಂಡಿದ್ದ ನಟ ಸೋನು ಸೂದ್ ಅವರು ಮುಂಬೈನಲ್ಲಿರುವ 8 ಆಸ್ತಿಗಳನ್ನು ಅಡವಿಟ್ಟಿದ್ದಾರೆ. 10 ಕೋಟಿ ರೂಪಾಯಿ ಅವಶ್ಯಕತೆ ಇದ್ದದ್ದರಿಂದ ಸೋನು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

ಸಾಲ ತುಂಬಲು 10 ಕೋಟಿ ರೂಪಾಯಿ ಅವಶ್ಯಕತೆಯಿದ್ದರಿಂದ ಸೋನು ಸೂದ್ ಅವರು ಜುಹುವಿನಲ್ಲಿರುವ ತಮ್ಮ 8 ಆಸ್ತಿ ಮೂಲಗಳನ್ನು ಅಡವಿಟ್ಟಿದ್ದಾರೆ. ಇದರಲ್ಲಿ 2 ಅಂಗಡಿಗಳು, 6 ಫ್ಲಾಟ್ ಇದೆ ಎನ್ನಲಾಗಿದೆ. ಕಳೆದ ಸೆಪ್ಟೆಂಬರ್ 15ರಂದು ಒಪ್ಪಂದಕ್ಕೆ ಸಹಿ ಹಾಕಿದ್ದು, ನವೆಂಬರ್ 24ಕ್ಕೆ ರೆಜಿಸ್ಟರ್ ಆಗಿದೆ ಎನ್ನಲಾಗಿದೆ.

ಹಲವಾರು ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಕೂಲ ಮಾಡಿಕೊಟ್ಟಿದ್ದರು. ಇನ್ನು ಕೆಲವರ ಸರ್ಜರಿ ಮಾಡಿಸಲು ಕೂಡ ಹಣ ಸಹಾಯ ಮಾಡಿದ್ದರು. ಇನ್ನು ಸೋನು ಸೂದ್, ಹಲವು ಕ್ಷೇತ್ರಗಳಲ್ಲಿನ ಕೆಲಸದ ಬಗ್ಗೆ ಮಾಹಿತಿ ನೀಡುವಂತ 'Pravasi Rojgar' ಆಪ್‌ವೊಂದನ್ನು ಲಾಂಚ್ ಮಾಡಿದ್ದರು. ಇದರಿಂದ ಎಲ್ಲಿ ಯಾವ ಕೆಲಸ ಖಾಲಿಯಿದೆ ಎಂಬುದು ತಿಳಿಯುತ್ತದೆ. ಸೋನು ಅವರ ಹೆಸರಿನಲ್ಲಿ ನಕಲಿ ಖಾತೆಗಳು ಕೂಡ ಸೃಷ್ಟಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ನಕಲಿ ಖಾತೆ ಬಳಸಿ ಮೋಸ ಹೋಗಬೇಡಿ ಎಂದಿದ್ದರು

Edited By : Nagaraj Tulugeri
PublicNext

PublicNext

09/12/2020 04:14 pm

Cinque Terre

89.81 K

Cinque Terre

5