ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಶ್ - ಅಭಿ ವಿಚ್ಛೇದನ ವದಂತಿ: ಅಭಿಷೇಕ್ ಹೇಳಿದ್ದೇನು

ಮುಂಬೈ: ಬಾಲಿವುಡ್‌ನ ಮೋಸ್ಟ್ ಫೆವರಿಟ್ ಜೋಡಿ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಬಹುದಿನಗಳಿಂದ ಕೇಳಿ ಬರುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ ಅನೇಕ ಬೆಳವಣಿಗೆಗಳು ನಡೆಯುತ್ತಿವೆ.

ಈ ವಿಚ್ಛೇದನದ ವದಂತಿಗಳ ನಡುವೆ, ದಂಪತಿಯ ಹಳೆಯ ವೀಡಿಯೊಗಳು ನಿರಂತರವಾಗಿ ವೈರಲ್ ಆಗುತ್ತಲೇ ಇವೆ. ಕೆಲ ದಿನಗಳಿಂದ ಇಬ್ಬರ ನಡುವೆ ಮನಸ್ತಾಪವಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅಭಿಷೇಕ್ ಬಚ್ಚನ್ ಅವರು "ಐಶ್ವರ್ಯಾ ಮತ್ತು ನಾನು ವಿಚ್ಛೇದನ ಪಡೆಯುತ್ತಿದ್ದೇವೆ" ಎಂದು ಹೇಳುವುದನ್ನು ಕಾಣಬಹುದು.

ಈ ವಿಡಿಯೋದಲ್ಲಿ ಅಭಿಷೇಕ್‌, ಐಶ್ವರ್ಯಾ ರೈ ಬಚ್ಚನ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡುತ್ತಿದ್ದಾರೆ.

ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. ಇದೇ ಸಂದರ್ಭದಲ್ಲಿ ಈ ವೀಡಿಯೋದಲ್ಲಿ ಅಭಿಷೇಕ್ ಬಚ್ಚನ್ ತಮ್ಮ ಮಗಳು ಆರಾಧ್ಯ ಬಚ್ಚನ್ ಬಗ್ಗೆಯೂ ಪ್ರಸ್ತಾಪಿಸುವುದನ್ನು ಸಹ ಕೇಳಬಹುದು.

ಅಂದಹಾಗೆ ಈ ವಿಡಿಯೊದ ಸತ್ಯಾಸತ್ಯತೆಯ ಬಗ್ಗೆ ತಿಳಿಯುವುದಾದರೆ, ಇದು ಡೀಪ್‌ ಫೇಕ್‌ ವಿಡಿಯೋ ಆಗಿದೆ. ಅಭಿಷೇಕ್ ಬಚ್ಚನ್ ಅವರ ಲಿಪ್ ಸಿಂಕ್ ಆಗದಿರುವುದು ಈ ವಿಡಿಯೋದಲ್ಲಿ ಕಾಣಿಸುತ್ತಿದ್ದು, AI ತಂತ್ರಜ್ಞಾನ ಅಥವಾ ಆನ್‌ ಲೈನ್ ಪರಿಕರಗಳನ್ನು ಬಳಸಿಕೊಂಡು ಮಾಡಲಾದ ವಿಡಿಯೋ ಎಂದು ಹೇಳಲಾಗುತ್ತಿದೆ.

ಇನ್ನು ಅಭಿಷೇಕ್ ಬಚ್ಚನ್ ಆಗಲಿ, ಐಶ್ವರ್ಯಾ ಆಗಲಿ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರಾಗಲಿ ಈ ವಿಷಯದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಹೀಗಂದ ಮಾತ್ರಕ್ಕೆ ಈ ವದಂತಿಯನ್ನು ನಿರಾಕರಿಸಿಯೂ ಇಲ್ಲ. ಹೀಗಿರುವಾಗ ಅವರ ಅಭಿಮಾನಿಗಳು ಸೇರಿದಂತೆ ಅನೇಕರಿಗೆ ಈ ಜೋಡಿ ವಿಚ್ಛೇದನ ಪಡೆಯುತ್ತದೆಯೇ ಎಂಬ ಅನುಮಾನದಲ್ಲಿದ್ದಾರೆ. ಅಷ್ಟೆ ಅಲ್ಲದೆ ಅನೇಕ ಈ ಜೋಡಿ ಎಂದಿಗೂ ವಿಚ್ಛೇದನ ಪಡೆಯದಿದ್ದರೆ ಸಾಕು ಎಂದು ಆಶಿಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

02/11/2024 09:37 pm

Cinque Terre

143.94 K

Cinque Terre

2