ಶ್ರೀನಗರ : ಕಣಿವೆ ರಾಜ್ಯದಲ್ಲಿ ಶಾಲೆ ಕಟ್ಟಲು ಬಾಲಿವುಡ್ ನಟ ಅಕ್ಷಯ್ ಕುಮಾರ್ 1ಕೋಟಿ ರೂ ದೇಣಿಗೆ ನೀಡಿದ್ದ ಶಾಲೆಯ ಭೂಮಿ ಪೂಜೆ ನಡೆಯಿತು. ಅಕ್ಷಯ್ ಈ ಹಿಂದೆ ಬಿಎಸ್ ಎಫ್ ಗೆ ಭೇಟಿ ನೀಡಿದ್ದರ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ದೇಶದ ಗಡಿ ಕಾಯುವ ನೈಜ ಹೀರೋಗಳನ್ನು ನಾನಿಂದು ಭೇಟಿಯಾದೆ. ಗೌರವದ ಹೊರತಾಗಿ ಮತ್ಯಾವ ಭಾವವೂ ನನ್ನಲ್ಲಿ ಮೂಡುತ್ತಿಲ್ಲ ಎಂದು ಅವರು ಬರೆದುಕೊಂಡಿದ್ದರು. ಆ ಸಂದರ್ಭದಲ್ಲಿಯೇ ಅವರು ಶಾಲೆಗೆ ದೇಣಿಗೆ ನೀಡಲು ಇಚ್ಛೆ ವ್ಯಕ್ತಪಡಿಸಿದ್ದರು. ಈಗ ಬಿಎಸ್ ಎಫ್ ಶಾಲೆಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಮಾಡಿರುವ ಮಾಹಿತಿ ಮತ್ತು ಚಿತ್ರಗಳನ್ನು ಹಂಚಿಕೊಂಡಿದೆ.
ಗಡಿ ಭದ್ರತಾ ಪಡೆಯ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಮಾಹಿತಿಯಂತೆ, ಅಕ್ಷಯ್ ಕುಮಾರ್ ಅವರ ತಂದೆ ದಿವಂಗತ ಹರಿ ಓಂ ಭಾಟಿಯಾ ಅವರ ಸ್ಮರಣಾರ್ಥವಾಗಿ, ಕಾಶ್ಮೀರದ ನೀರುವಿನ ಸರ್ಕಾರಿ ಶಾಲೆಯ ಹೊಸ ಸಂಕೀರ್ಣಕ್ಕೆ ಅಡಿಪಾಯವನ್ನು ಹಾಕಲಾಗಿದೆ.
ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಅವರು ವೆಬ್ ಲಿಂಕ್ ಮೂಲಕ ಉಪಸ್ಥಿತರಿದ್ದರು ಎಂದು ತಿಳಿಸಲಾಗಿದೆ.
PublicNext
28/07/2021 05:38 pm