ಹತ್ತು ವರ್ಷ ಪ್ರೀತಿಸಿ ಮದುವೆಯಾದ ಚಿರು ಪತ್ನಿ, ಚಿರುನೀಡಿದ ಮಗುವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು, ಚಿರಂಜೀವಿ ಸರ್ಜಾ ಅಗಲಿಕೆಯ ಅಗಲಿಕೆಯನ್ನು ಸಹಿಸಲು ಕಷ್ಟ ಪಡುತ್ತಿದ್ದಾರೆ. ಆದರೆ ಮೇಘನಾ ಕುರಿತು, ಕೆಲ ಯೂಟ್ಯೂಬ್ ಚಾನಲ್‍ಗಳಲ್ಲಿ ಮೇಘನಾ ಮಗು ಕುರಿತು ಅನೇಕ ಸುಳ್ಳು, ಸುದ್ದಿಗಳು, ಗಾಳಿ ಸುದ್ದಿಗಳು ಹರಿದಾಡುತ್ತಿವೆ.
ಮೇಘನಾ ರಾಜ್ ಅವರಿಗೆ ಅವಳಿ ಮಕ್ಕಳಾಗಿವೆ ಎಂಬ ಸುಳ್ಳು ಸುದ್ದಿಯನ್ನು ಹರಿಬಿಡ್ತಿದ್ದಾರೆ. ಆ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನಟಿ ಮೇಘನಾ ರಾಜ್ ಫೇಕ್ ಸುದ್ದಿಗಳ ವಿರುದ್ಧ ಗರಂ ಆಗಿದ್ದಾರೆ.
ನಟಿ ಮೇಘನಾ ಟ್ವಿಟ್ಟರ್, ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಫೇಕ್ ಸುದ್ದಿಗಳ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವಿಡಿಯೋದ ಸ್ಕ್ರೀನ್‍ಶಾಟ್ ತೆಗೆದುಕೊಂಡು ಆ ಫೋಟೋವನ್ನು ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದು ಸುಳ್ಳು ಸುದ್ದಿ ನಂಬಬೇಡಿ ಎಂದಿರುವ ಮೇಘನಾ, "ನನ್ನ ಜೀವನದಲ್ಲಿ ಏನಾಗುತ್ತಿದೆ ಎಂದು ಇವರಿಗೆ ಹೇಗೆ ಗೊತ್ತು. ನನ್ನ ಬಗ್ಗೆ ನನಗೇ ಗೊತ್ತಿಲ್ಲದ ವಿಚಾರಗಳು. ಎಷ್ಟು ಚೆನ್ನಾಗಿ ಫೋಟೋಶಾಪ್ ಮಾಡಿದ್ದಾರೆ. ಸದ್ಯದಲ್ಲೇ ಇದೆಲ್ಲದಕ್ಕೂ ವಿವರವಾದ ಉತ್ತರ ನೀಡಲಿದ್ದೇನೆ. ಅಲ್ಲಿಯವರೆಗೆ ಯಾರೂ ಸುಳ್ಳು ಸುದ್ದಿಗಳನ್ನು ಹರಡಬೇಡಿ, ನಂಬಬೇಡಿ ಎಂದು ಮನವಿ ಮಾಡಿದ್ದಾರೆ. ನನ್ನ ಬಗೆಗಿನ ಯಾವುದೇ ವಿಚಾರಗಳನ್ನು ನಾನೇ ನೇರವಾಗಿ ಹೇಳಲಿದ್ದೇನೆ" ಎಂದು ಮೇಘನಾ ರಾಜ್ ಮನವಿ ಮಾಡಿಕೊಂಡಿದ್ದಾರೆ.
“ಸತ್ಯ ಏನೆಂದು ತಿಳಿದುಕೊಳ್ಳದೆ ಕೆಲವರು ಯುಟ್ಯೂಬ್ನಲ್ಲಿ ವೀವ್ಸ್ ಮತ್ತು ಲೈಕ್ಗೋಸ್ಕರ ಇಲ್ಲಸಲ್ಲದ ಸುದ್ದಿಯನ್ನು ಹರಿಬಿಡುತ್ತಾರೆ
ಹಾಗೇನಾದರೂ ನನ್ನ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸ್ವತಃ ನಾವೇ ನೀಡುತ್ತೇವೆ. ಇಂತಹ ಸುದ್ದಿಗಳಿಗೆ ಕಿವಿಗೊಡಬೇಡಿ “ಎಂದು ಮೇಘನಾ ರಾಜ್ ಸ್ಪಷ್ಟನೆ ಕೊಟ್ಟಿದ್ದಾರೆ.
PublicNext
24/09/2020 09:27 pm