ಬೆಂಗಳೂರು: ನಟ ಕಿಚ್ಚ ಸುದೀಪ್‌ಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಅವರ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರ ಭರದಿಂದ ಸಾಗಿದೆ.
ಚಿತ್ರದ ಪ್ರಚಾರಕ್ಕಾಗಿ ಸದ್ಯ ಕಿಚ್ಚ ಸುದೀಪ್ ರಾಜ್ಯದ ಹಲವೆಡೆ ಸುತ್ತಾಡುತ್ತಿದ್ದಾರೆ. ಇದೇ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆಗಳಿವೆ. ಎರಡನೇ ಬಾರಿ ಕಿಚ್ಚನಿಗೆ ಸೋಂಕು ತಗುಲಿದ್ದರಿಂದ ಅವರು ಹೆಚ್ಚು ಜಾಗೃತೆ ವಹಿಸಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.
PublicNext
20/07/2022 06:34 pm