ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಜನಿಕಾಂತ್ ಪುತ್ರಿಯ Hoote APP:ಇದಕ್ಕೆ ರಜನಿನೇ ಸ್ಫೂರ್ತಿ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಸ್ಫೂರ್ತಿಯಿಂದಲೇ ರೆಡಿಯಾಗಿದೆ ಪುತ್ರಿ ಸೌಂದರ್ಯ ಹೊಸ ಆ್ಯಪ್ .ತಂದೆಗೆ ತಮಿಳು ಮಾತನಾಡಲು ಬರುತ್ತದೆ. ಆದರೆ ಬರೆಯಲು ಬರೋದೇ ಇಲ್ಲ. ಹಂಗಾಗಿಯೇ ಈ ಆ್ಯಪ್ ಅನ್ನ ಸೌಂದರ್ಯ ರೆಡಿ ಮಾಡಿದ್ದಾರೆ. ತಂದೆ ರಜನಿಕಾಂತ್ ರಿಂದಲೇ ಈ ಆ್ಯಪ್ ಲಾಂಚ್ ಕೂಡ ಮಾಡಿಸಿದ್ದಾರೆ.

ರಜನಿಕಾಂತ್ ಪುತ್ರಿ ಸೌಂದರ್ಯ ಧ್ವನಿ ಆಧಾರಿತ ಹೂಟ್ (Hoote) ಹೆಸರಿನ ಆ್ಯಪ್ ರೆಡಿ ಮಾಡಿದ್ದಾರೆ. ತಂದೆ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಧ್ವನಿಯನ್ನ ಈ ಆ್ಯಪ್ ನಲ್ಲಿ ರೆಕಾರ್ಡ್ ಮಾಡೋ ಮೂಲಕ ಇದಕ್ಕೆ ಚಾಲನೆ ನೀಡಿದ್ದಾರೆ. ಈ ವಿಶೇಷ ಆ್ಯಪ್ ನಲ್ಲಿ 60 ಸೆಕೆಂಡ್ ಧ್ವನಿಯನ್ನ ರೆಕಾರ್ಡ್ ಮಾಡಬಹುದು.15 ಭಾರತೀಯ ಮತ್ತು 10 ವಿದೇಶಿ ಭಾಷೆಗಳನ್ನು ಇದರಲ್ಲಿ ರೆಕಾರ್ಡ್ ಮಾಡಬಹುದಾಗಿದೆ. ತಂದೆಗೆ ತಮಿಳು ಮಾತನಾಡಲು ಬರುತ್ತದೆ. ಆದರೆ ಬರೆಯಲು ಬರೋದಿಲ್ಲ. ಈ ಒಂದು ಸ್ಫೂರ್ತಿಯಿಂದಲೇ ಧ್ವನಿ ಆಧಾರಿತ ಈ ಹೂಟ್ ಅಪ್ಲಿಕೇಷನ್ ರೆಡಿ ಮಾಡಿದ್ದೇವೆ ಎಂದಿದ್ದಾರೆ ರಜನಿ ಪುತ್ರಿ ಸೌಂದರ್ಯ.

Edited By :
PublicNext

PublicNext

26/10/2021 04:26 pm

Cinque Terre

36.57 K

Cinque Terre

0