ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಟಾಲಿವುಡ್, ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿದ್ದಾರೆ. ಸೀ ಫುಡ್‌ಗೆ ಸಿಕ್ಕಾಪಟ್ಟೆ ಫೇಮಸ್ ಈ ಕರಾವಳಿ ಜಿಲ್ಲೆ. ಅದರಲ್ಲೂ ಅಮ್ಮ ಮಾಡಿದ ಮೀನು ಕರಿಗೆ ನಟಿ ಫಿದಾ ಆಗಿದ್ದಾರೆ.
ನಟಿ ಪೂಜಾ ಹೆಗ್ಡೆ ಅವರಿಗೆ ಮೀನು ಸಾರು ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಎನ್ನುವುದು ಗೊತ್ತಾ? ಅವರು ಮೊಹೆಂಜದಾರೋ ಬ್ಯೂಟಿ ಮಣ್ಣಿನ ಪಾತ್ರೆಯಲ್ಲಿ ಬಿಸಿ ಬಿಸಿ ಮೀನಿನ ಸಾರು ಇರುವ ಫೋಟೋವನನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ''ಅಮ್ಮನ ಮ್ಯಾಜಿಕಲ್, ಮಂಗಳೂರು ಮೀನು ಕರಿ'' ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
PublicNext
24/12/2020 12:26 pm