ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಅನ್ನೋದೇ ಒಂದು ಕ್ರೇಜ್. ಈ ಕ್ರೇಜ್ ಎಲ್ಲ ನಟ ನಟಿಯರಿಗೂ ಇದ್ದೇ ಇರುತ್ತೆ. ಅನೇಕ ದೈಹಿಕ ಕಸರತ್ತುಗಳನ್ನು ಮಾಡಿ ಆ ಮೂಲಕ ಸ್ಟಾರ್ ನಟರು ಆ ವಿಷಯದಲ್ಲಿ ಇತರರಿಗೆ ಮಾದರಿಯಾಗ್ತಾರೆ. ಸ್ಯಾಂಡಲ್‌ವುಡ್‌ನಲ್ಲಿ ಇಂತಹ ನಟರ ಪಟ್ಟಿಯಲ್ಲಿ ಇರವವರೆಂದರೆ ದಿಗಂತ್ ಸಹ ಒಬ್ಬರು.
ದೂದ್ ಪೇಢಾ ದಿಗಂತ್ ಜಿಮ್‌ಗೆ ಹೋಗಿ ಬೆವರಿಳುವುದಕ್ಕಿಂತಲೂ ಹೊರಾಂಗಣ ವ್ಯಾಯಾಮಕ್ಕೆ ಹೆಚ್ಚು ಒತ್ತು ನೀಡುತ್ತಾರೆ ದಿಗಂತ್.
ನಿನ್ನೆಯಷ್ಟೆ ನಟ ದಿಗಂತ್ ಹೊಸ ಸಾಹಸವೊಂದನ್ನು ಮಾಡಿದ್ದಾರೆ. ಬರೋಬ್ಬರಿ 192 ಕಿ.ಮೀ ದೂರ ಸೈಕಲ್ ತುಳಿದಿದ್ದಾರೆ. ಬೆಂಗಳೂರಿನಿಂದ ಹಾಸನಕ್ಕೆ ಸೈಕಲ್ ಹೊಡೆದಿದ್ದಾರೆ ದಿಗಂತ್. ಕಾರಿನಲ್ಲಿ ಹೋದರೆ 3:30 ಗಂಟೆ ಸಮಯ ಹಿಡಿಯುವ ಹಾದಿಯನ್ನು ಸೈಕಲ್‌ನಲ್ಲಿ 8 ಗಂಟೆ 23 ನಿಮಿಷಕ್ಕೆ ಮುಗಿಸಿದ್ದಾರೆ ದಿಗಂತ್.
ಸಾಹಸ ಕ್ರೀಡೆಗಳ ಹವ್ಯಾಸ ಬೆಳೆಸಿಕೊಂಡಿರುವ ದಿಗಂತ್, ಆಗಾಗ್ಗೆ ಸೈಕಲ್ ಸವಾರಿ ಹೋಗುತ್ತಿರುತ್ತಾರೆ. ಜೊತೆಗೆ ಕೆಲ ಗೆಳೆಯರು ಹಾಗೂ ಪತ್ನಿ ಐಂದ್ರಿತಾ ರೇ ಅನ್ನೂ ಸಹ ಕರೆದೊಯ್ಯುತ್ತಾರೆ.
ತಮ್ಮ ಬೆಂಗಳೂರು-ಹಾಸನ ಸೈಕಲ್ ಸವಾರಿಯ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ದಿಗಂತ್, 'ಬಹಳ ಅದ್ಭುತವಾದ ರೈಡ್ ಇದಾಗಿತ್ತು, ಈ ರೈಡ್, ಸಾಧನೆಯಲ್ಲ ಬದಲಿಗೆ ನನ್ನ ಸಹಿಷ್ಣುತೆಯ ಪರೀಕ್ಷೆ' ಎಂದು ಬರೆದುಕೊಂಡಿದ್ದಾರೆ.
PublicNext
20/12/2020 03:56 pm