ಬಾಲಿವುಡ್, ಹಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಇಂಟಿಮೇಟ್ ಅಥವಾ ಕಿಸ್ಸಿಂಗ್ ಸೀನ್‌ಗಳು ಇದ್ದೇ ಇರುತ್ತವೆ. ಇತ್ತ ಬಾಲಿವುಡ್‌ನ ಕೆಲವು ಸಿನಿಮಾಗಳಲ್ಲಿ ಯೂನಿಕ್ ಕಿಸ್ಸಿಂಗ್ ಸೀನ್ ಕಾಣಬಹುದು. ಅಂತಹ ಚಿತ್ರಗಳ ಪೋಸ್ಟರ್‌ಗಳು ಸಾಕಷ್ಟು ಸುದ್ದಿ ಮಾಡಿದ್ದು ಉಂಟು.
2016ರಲ್ಲಿ ತೆರೆ ಕಂಡ 'ಬೆಫಿಕ್ರೆ', 2020ರ ಫೆಬ್ರವರಿಯಲ್ಲಿ ಬಿಡುಗಡೆಯಾದ 'ಮಲಾಂಗ್'ವರೆಗಿನ ಅನೇಕ ಬಾಲಿವುಡ್ ಸಿನಿಮಾಗಳ ಯೂನಿಕ್ ಕಿಸ್ಸಿಂಗ್ ಸೀನ್ ಪೋಸ್ಟರ್ಸ್ ಭಾರೀ ಸದ್ದು ಮಾಡಿವೆ.
ರಣವೀರ್ ಸಿಂಗ್ ಮತ್ತು ವಾನಿ ಕಪೂರ್ ಅಭಿನಯದ ಬೆಫಿಕ್ರೆ ಸಿನಿಮಾದಲ್ಲಿ ಅನೇಕ ಲಿಪ್‌ಲಾಕ್ ದೃಶ್ಯಗಳನ್ನು ಹೊಂದಿದೆ. ಆದರೆ ಚಿತ್ರದ ನಿರ್ದೇಶಕರು ತಮ್ಮ ಪೋಸ್ಟರ್ ಅನ್ನು ಇಂಟರೆಸ್ಟಿಂಗ್ ಆಗಿಸಲು ವಿಭಿನ್ನ ಬ್ಯಾಕ್‌ಡ್ರಾಪ್‌ಗಳಲ್ಲಿ ಸ್ಮೂಚ್ ಮಾಡುವ ಚಿತ್ರಗಳನ್ನು ಶೂಟ್ ಮಾಡಿದ್ದಾರೆ.
ಓಕೆ ಜಾನು (2017):
ಆದಿತ್ಯ ರಾಯ್ ಕಪೂರ್ ಮತ್ತು ಶ್ರದ್ಧಾ ಕಪೂರ್ ನಟಿಸಿದ ಓಕೆ ಜಾನು ಪೋಸ್ಟರ್‌ನ ಕಿಸ್ಸಿಂಗ್ ಫೋಟೋ ಕೂಡ ತುಂಬಾ ಯೂನಿಕ್ ಆಗಿ ಮೂಡಿ ಬಂದಿತ್ತು. ಪೋಸ್ಟರ್‌ನಲ್ಲಿ ಚಿತ್ರದ ನಿರ್ದೇಶಕರು ಕ್ರೀಯೆಟಿವಿಟಿ ಎದ್ದು ಕಾಣುತ್ತದೆ.
ಜಲೇಬಿ (2018): ಮಹೇಶ್ ಭಟ್ ನಿರ್ದೇಶನದ ಜಲೇಬಿ ಸಿನಿಮಾದಲ್ಲಿ ರಿಯಾ ಚಕ್ರವರ್ತಿ ನಟಿಸಿದ್ದಾರೆ. ಇದರ ಪೋಸ್ಟರ್ ಸ್ವಲ್ಪ ಅತಿ ಅನಿಸಿತ್ತು. ರಿಯಾ ಕೋಸ್ಟಾರ್ ವರುಣ್ ಮಿತ್ರಗೆ ರೈಲಿನ ಕಿಟಕಿಯಿಂದ ಕಿಸ್ ಮಾಡುತ್ತಿರುವ ಸೀನ್ ಸಖತ್ ಸದ್ದು ಮಾಡಿತ್ತು.
ಜಿದ್ (2014): ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಸೈಕೋ-ಥ್ರಿಲ್ಲರ್ ಸಿನಿಮಾದ ಪೋಸ್ಟರ್ ಸಾಕಷ್ಟು ಸೆನ್ಸೆಷನಲ್ ಪೋಸ್ಟರ್ ಅನ್ನು ಹೊಂದಿದೆ. ಸಿನಿಮಾ ನಿರ್ಮಾಪಕರು ಚಿತ್ರದ ಸಸ್ಪೆನ್ಸ್ ಅನ್ನು ಪೋಸ್ಟರ್‌ನಲ್ಲಿ ಇಡಲು ಪ್ರಯತ್ನಿಸಿದ್ದಾರೆ.
ಮಲಾಂಗ್: ಈ ವರ್ಷ ಬಿಡುಗಡೆಯಾದ ಮಲಾಂಗ್‌ನಲ್ಲಿ ಆದಿತ್ಯ ರಾಯ್ ಕಪೂರ್, ದಿಶಾ ಪಟಾನಿ, ಕುನಾಲ್ ಖೇಮು, ಅನಿಲ್ ಕಪೂರ್ ನಟಿಸಿದ್ದಾರೆ. ಆದಿತ್ಯ ರಾಯ್ ಕಪೂರ್ ಮತ್ತು ದಿಶಾ ನಡುವೆ ಲಿಪ್ ಲಾಕ್ ಸೀನ್ ಸಖತ್ ಹಾಟ್ ಆಗಿದೆ.
PublicNext
16/12/2020 08:06 pm