ಬೆಂಗಳೂರು: ಸೆಲೆಬ್ರೆಟಿಗಳು ಸಹಾಯ ಮಾಡತ್ತಾರೆ ಹೊರತು ನೆರವು ಕೇಳಲ್ಲ. ಆದ್ರೆ ನಟಿ ಜೂಹಿ ಚಾವ್ಲಾ ಸೋಷಿಯಲ್ ಮೀಡಿಯ ಮೂಲಕ ನೆರವು ಕೋರಿದ್ದಾರೆ.
ಅಷ್ಟಕ್ಕೂ ನಟಿಗೆ ಬಂದಿರುವ ಕಷ್ಟವಾದ್ರು ಏನು ಅಂದ್ರೆ ಅವರು ತಮ್ಮ ಅಮೂಲ್ಯವಾದ ಕಿವಿಯೋಲೆವೊಂದನ್ನಾ ಕಳೆದುಕೊಂಡು ಕಂಗಾಲಾಗಿದ್ದಾರೆ.
ಹೌದು ವಜ್ರಖಚಿತ ಕಿವಿಯೋಲೆ ಒಂದು ಕಳೆದುಹೋಗಿದೆ. ಹುಡುಕಿಕೊಟ್ರೆ ಬಹುಮಾನ ಕೊಡ್ತೇನೆ ಅಂತ ಕಳೆದು ಹೋದ ಕಿವಿಯೋಲೆಯ ಜೊತೆಯ ಇನ್ನೊಂದರ ಚಿತ್ರವನ್ನು ನಟಿ ಜೂಹಿ ಚಾವ್ಲಾ ಟ್ವೀಟ್ ಮಾಡಿದ್ದಾರೆ.
ಜೂಹಿ ಚಾವ್ಲಾ ಅವರು ಭಾನುವಾರ ಬೆಳಗ್ಗೆ ಮುಂಬಯಿ ಇಂಟರ್ನ್ಯಾಷನಲ್ ಏರ್ ಪೋರ್ಟ್ ನ ಟಿ2, ಗೇಟ್ 8ರ ಮೂಲಕ ಹೋಗುತ್ತಿರುವಾಗ ಎಮಿರೇಟ್ಸ್ ಕೌಂಟರ್, ಸೆಕ್ಯುರಿಟಿ ಚೆಕ್ ಇಮ್ಮಿಗ್ರೇಶನ್ಸ್ , ಪ್ರಣಾಮ್ ಬಗ್ಗಿ ಆ ಪ್ರದೇಶದಲ್ಲೆಲ್ಲೋ ಒಂದು ಕಿವಿಯಲ್ಲಿದ್ದ ರತ್ನಖಚಿತ ಆಭರಣ ಬಿದ್ದು ಹೋಗಿದೆ.
ಯಾರದರೂ ಅದನ್ನು ಪತ್ತೆ ಹಚ್ಚುವಲ್ಲಿ ನೆರವಾದರೆ ತುಂಬಾ ಸಂತೋಷ. ಪೊಲೀಸರಿಗೆ ಮಾಹಿತಿ ಕೊಡಿ. ನಾನು ನಿಮಗೆ ಬಹುಮಾನ ಕೊಡುವೆ.
ಕಳೆದ ಹದಿನೈದು ವರ್ಷಗಳಿಂದ ಧರಿಸುತ್ತಿರುವ ಆಭರಣವಿದು. ಒಂದು ಕಳೆದು ಹೋಗಿದೆ. ಇನ್ನೊಂದರ ಚಿತ್ರ ಇಲ್ಲಿದೆ.
ಯಾರದರೂ ನನಗೆ ನೆರವಾಗಿ. ಧನ್ಯವಾದಗಳು ಎಂದು ಟ್ವೀಟ್ ಮಾಡಿ ನೆರವು ಕೋರಿದ್ದಾರೆ.
PublicNext
14/12/2020 01:45 pm