ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಟಾಲಿವುಡ್ ನಟ ವಿಜಯ್ ರಂಗರಾಜು ವಿರುದ್ಧ ದಾದಾ ಅಭಿಮಾನಿಗಳು, ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿ ಟಾಲಿವುಡ್ ನಟನಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ವಿಡಿಯೋ ಮೂಲಕ ನಟ ವಿಜಯ್ ರಂಗರಾಜುಗೆ ಎಚ್ಚರಿಕೆ ನೀಡಿರುವ ಸುದೀಪ್, ಒಬ್ಬ ಅಭಿಮಾನಿಯಾಗಿ ನಟನಾಗಿ ಮಾತನಾಡುತ್ತಿದ್ದೇನೆ. ವ್ಯಕ್ತಿ ಬದುಕಿದ್ದಾಗ ಮಾತನಾಡಿದ್ರೆ ಅದು ಗಂಡಸ್ತನ. ಆಗ ಅವರಿಲ್ಲದಿರುವಾಗ ಮಾತನಾಡಿರುವುದು ದೊಡ್ಡ ತಪ್ಪು. ಕೋಟಿ ಜನರ ಆರಾಧ್ಯ ದೈವ ಆಗಿರುವ ಅವರು ಇಲ್ಲದಾಗ ಮಾತನಾಡುವುದು ತುಂಬ ತಪ್ಪು. ವಾರ್ನಿಂಗ್ ಮಟ್ಟಕ್ಕೆ ಇಳಿಯಬೇಡಿ, ಅವರಿಲ್ಲದಿದ್ದರೂ ನಾವೆಲ್ಲರೂ ಇದ್ದೇವಿ. ನಿಮ್ಮ ಮಾತನ್ನು ಹಿಂದೆಗೆದುಕೊಳ್ಳಿ ಎಂದು ಹೇಳಿದ್ದಾರೆ.
''ಸ್ಯಾಂಡಲ್‌ವುಡ್ ಅಷ್ಟೇ ಅಲ್ಲದೆ ಎಲ್ಲಾ ಇಂಡಸ್ಟ್ರಿಯ ಕಲಾವಿದರಿಗೂ ನಾವು ಗೌರವ ಕೊಡುತ್ತೇವೆ. ಅದನ್ನೇ ನಾವು ನಿರೀಕ್ಷಿಸುತ್ತೇವೆ. ವಿಡಿಯೋದಲ್ಲಿ ಹಂಗ್ ಹಿಡ್ಕೊಂಡ್ ಬಿಟ್ವಿ, ಹಿಂಗ್ ಹಿಡ್ಕೊಂಡ್ ಬಿಟ್ವಿ ಅಂದಿದ್ದೀರ. ಅವರಿಲ್ಲದೆ ಇರಬಹುದು ನಾವಿನ್ನೂ ಇದ್ದೇವೆ. ಆ ಲೆವೆಲ್‌ಗೆ ಹೋಗುವುದು ಬೇಡ ಸರ್.. ವಾರ್ನಿಂಗ್‌ಗೆ ಇಳಿಬೇಡಿ ಇಲ್ಲ್ಯಾರು ಕೈಲಾಗದೇ ಇಲ್ಲದವರು ಇಲ್ಲ. ಅವರಿಲ್ಲದೇ ಇರಬಹುದು ಕೋಟಿ ಕೋಟಿ ಮಕ್ಕಳನ್ನ ಬಿಟ್ಟು ಹೋಗಿದ್ದಾರೆ. ನೀವು ಹೇಳಿರುವ ಮಾತುಗಳನ್ನ ವಾಪಸ್ ತಗೊಳಿ'' ಎಂದು ಕಿಚ್ಚ ತಿಳಿಸಿದ್ದಾರೆ.
PublicNext
12/12/2020 05:57 pm