ಸ್ಯಾಂಡಲವುಡ್ ಮುಂಗಾರುಮಳೆ-2 ಸಿನಿಮಾ ಅಭಿಯನಯದ ನಂತರ ಕನ್ನಡದಲ್ಲಿ ಖಾತೆ ತೆರೆದ ಮಂಗಳೂರು ಬೆಡಗಿ ನೇಹಾ ಶೆಟ್ಟಿ ಇದೀಗ ಬಹುದಿನಗಳ ಬಳಿಕ ಬೇರೊಂದು ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಅಕ್ಕಿನೇನಿ ನಾಗಾರ್ಜುನ ಅವರ ಕಿರಿಯ ಮಗ ಅಖಿಲ್ ಸದ್ಯ 'ಮೋಸ್ಟ್ ಎಲಿಜೆಬಲ್ ಬ್ಯಾಚುಲರ್' ಎಂಬ ಸಿನಿಮಾದಲ್ಲಿ ನಾಯಕರಾಗಿ ಅಭಿನಯಕ್ಕೆ ಎಸ್ ಎಂದಿದ್ದು ಅವರಿಗೆ ನಾಯಕಿಯಾಗಿ ನೇಹಾ ಶೆಟ್ಟಿ ನಟಿಸುತ್ತಿದ್ದಾರೆ.
ಈಗಾಗಲೇ ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಇದೇ ಸಿನಿಮಾ ತಂಡಕ್ಕೆ ನೇಹಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.
'ಮೋಸ್ಟ್ ಎಲಿಜೆಬಲ್ ಬ್ಯಾಚುಲರ್' ಸಿನಿಮಾದಲ್ಲಿ ಅಖಿಲ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಸಾಥ್ ನೀಡಲಿದ್ದಾರೆ.
ಪುರಿ ಜಗನ್ನಾಥ ನಿರ್ದೇಶನದ 'ಮೆಹಬೂಬ' ಸಿನಿಮಾ ಮೂಲಕ ಟಾಲಿವುಡ್ ಅಂಗಳದಲ್ಲಿ ನಟನಾ ಛಾಪು ಮೂಡಿಸಿದ್ದ ನೇಹಾ ಶೆಟ್ಟಿ. ಇದೀಗ ಹೊಸ ಅವಕಾಶದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
'ಬೊಮ್ಮಿರಿಲ್ಲು' ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಭಾಸ್ಕರ್ ಈ ಸಿನಿಮಾ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಬನ್ನಿ ವಾಸು, ವಾಸು ವರ್ಮಾ ಈ ಸಿನಿಮಾಗೆ ಹಣ ಹಾಕಲು ಎಸ್ ಎಂದಿದ್ದಾರೆ.
PublicNext
09/12/2020 07:46 pm