ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

50 ರೂ. ಸಂಭಾವನೆ ಪಡೆಯುತ್ತಿದ್ದ ಬಾಲಿವುಡ್ ಬಾದ್‍ಶಾ ಸದ್ಯ ಕೋಟಿಗಳ ಸರದಾರ

ಮುಂಬೈ: ಒಂದು ಕಾಲದಲ್ಲಿ 50 ರೂ. ಸಂಭಾವನೆ ಪಡೆಯುತ್ತಿದ್ದ ಬಾಲಿವುಡ್​ ಬಾದ್‌ಶಾ ಶಾರುಖ್ ಖಾನ್ ಅವರು ಸದ್ಯ ಸಾವಿರ ಕೋಟಿ ಸರದಾರ. ವಿಶೇಷವೆಂದರೆ ಅವರ ಬಳಿ ಇರುವ ಕೇವಲ ನಾಲ್ಕೇ ನಾಲ್ಕು ಪ್ರಾಪರ್ಟಿ 1,000 ಕೋಟಿ ರೂ.ಗೂ ಅಧಿಕ ಬೆಲೆ ಬಾಳುತ್ತವೆ.

ಶಾರುಖ್​ ಖಾನ್​ ಅವರು 2001ರಲ್ಲಿ ಮುಂಬೈನ ಬಾಂಧ್ರಾದಲ್ಲಿನ ಮನ್ನತ್​ ಬಂಗಲೆಯನ್ನು ಖರೀದಿಸಿದ್ದರು. ಇದೀಗ ಆ ಮನೆಯ ಒಟ್ಟು ಮೌಲ್ಯ ಬರೋಬ್ಬರಿ 200 ಕೋಟಿ ರೂ. ಆಗಿದೆ. ಲಂಡನ್​ನಲ್ಲೂ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಲಂಡನ್​ನ ದುಬಾರಿ ಪ್ರದೇಶದಲ್ಲಿ 200 ಕೋಟಿ ರೂ. ಮೌಲ್ಯದ ಮನೆಯನ್ನು ಶಾರುಖ್​ ಹೊಂದಿದ್ದಾರೆ.

ಬಾಲಿವುಡ್‌ ಬಾದ್‌ಶಾ ನಿರ್ಮಾಣ ಸಂಸ್ಥೆಯ ಮೌಲ್ಯವೂ ಅಷ್ಟೇ ದೊಡ್ಡ ಮಟ್ಟದಲ್ಲಿದೆ. 2002ರಲ್ಲಿ ಆರಂಭಿಸಿದ ರೆಡ್ ಚಿಲ್ಲೀಸ್ ಎಂಟರ್​ಟೈನ್​ಮೆಂಟ್​ ಸಂಸ್ಥೆ ಇದೀಗ ಏನಿಲ್ಲ ಅಂದರೂ 500 ಕೋಟಿ ರೂ.ಗೆ ಬೆಲಬಾಳುತ್ತದೆ. ಉಳಿದಂತೆ ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್​ ತಂಡದ ಮಾಲೀಕರಾಗಿದ್ದಾರೆ. ಇದರಲ್ಲಿ ಶೇ.55 ರಷ್ಟು ಶೇರುಗಳು ಶಾರುಖ್​ ಹೆಸರಿನಲ್ಲಿವೆ. 2019ರಲ್ಲಿಯೇ ಈ ತಂಡದ ಒಟ್ಟು ಮೌಲ್ಯ 630 ಕೋಟಿ ರೂ. ಆಗಿತ್ತು.

Edited By : Vijay Kumar
PublicNext

PublicNext

06/12/2020 03:28 pm

Cinque Terre

48.28 K

Cinque Terre

9