ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸಾರಥ್ಯದಲ್ಲಿ ಮೂಡಿಬಂದ ಆಕ್ಟ್ 1978 ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಬಳಿಕ ರಿಲೀಸ್ ಆದ ಮೊದಲ ಸಿನಿಮಾ ಆಕ್ಟ್ 1978 ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ನಿರೀಕ್ಷೆಗೂ ಮೀರಿ ವ್ಯಕ್ತವಾದ ಪ್ರತಿಕ್ರಿಯೆಗೆ ಇಡೀ ಸಿನಿಮಾತಂಡ ಸಂತಸ ಪಟ್ಟಿದೆ. ಕೊರೊನಾ ಕಾಲದಲ್ಲೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಅನೇಕರು ಹಾಡಿ ಹೊಗಳುತ್ತಿದ್ದಾರೆ.
ವಿಶೇಷ ಎಂದರೆ ಆಕ್ಟ್ 1978 ಸಿನಿಮಾವನ್ನು ನಾದಬ್ರಹ್ಮ ಹಂಸಲೇಖ ಸಹ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿ ಹೊರಬರುತ್ತಿದ್ದಂತೆ ವಿಡಿಯೋ ಮೂಲಕ ವಿಮರ್ಶೆ ಮಾಡಿ ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲ ನಿರ್ದೇಶಕ ಮಂಸೋರೆ ಅವರಿಗೆ ಖುದ್ದಾಗಿ ಹಂಸಲೇಖ ಅವರೇ ಕಾಲ್ ಮಾಡಿ ಹಾಡಿಹೊಗಳಿದ್ದಾರೆ.
ಈ ಬಗ್ಗೆ ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 'ದೇವರೇ ಭಕ್ತನಿಗೆ ಕಾಲ್ ಮಾಡಿ ಮಾತನಾಡಿದರು, ಮೊದಲಿಗೆ ಸಿನೆಮಾ ಬಗ್ಗೆ ನಾನ್ ಸ್ಟಾಪ್ ಮೆಚ್ಚುಗೆಯ ಮಾತನಾಡಿ ಕೊನೆಯಲ್ಲಿ ಹೆಸರು ಹೇಳಿದರು. ಆ ಕ್ಷಣ ಮಾತುಗಳೇ ಹೊರಡದಾಯಿತು. ಥ್ಯಾಂಕ್ಯೂ ಹಂಸಲೇಖ ಸರ್' ಎಂದು ಬರೆದುಕೊಂಡಿದ್ದಾರೆ.
PublicNext
28/11/2020 04:39 pm