ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನಿನ್ನಲ್ಲಿ ನನ್ನ ಮಗ ಕಾಣುತ್ತಿದ್ದಾನೆ'- ಅದಿವಿ ಶೇಷ್‌ರನ್ನ ತಬ್ಬಿಕೊಂಡು ಭಾವುಕರಾದ ಉನ್ನಿಕೃಷ್ಣನ್ ತಾಯಿ

ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರಮರಣ ಕಂಡ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುರಿತಾದ ‘ಮೇಜರ್’ ಚಿತ್ರ ತೆರೆಯ ಮೇಲೆ ಬರಲು ಸಿದ್ಧವಾಗುತ್ತಿದೆ. ತೆಲುಗಿನ ಜನಪ್ರಿಯ ನಟ ಅದಿವಿ ಶೇಷ್ ಈ ಸಿನಿಮಾ ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

'ಮೇಜರ್’ ಸಿನಿಮಾದಲ್ಲಿ ಸಂದೀಪ್ ಉನ್ನಿಕೃಷ್ಣನ್ ಅವರ ಪಾತ್ರದಲ್ಲಿ ಅದಿವಿ ಶೇಷ್ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಅದಿವಿ ಶೇಷ್, 'ಮುಂಬೈ ಮೇಲೆ ಉಗ್ರರ ದಾಳಿ ನಡೆದಾಗ ಅಮೆರಿಕದಲ್ಲಿದ್ದೆ. ಮೇಜರ್ ಉನ್ನಿ ಕೃಷ್ಣನ್ ಹುತಾತ್ಮರಾದ ಸುದ್ದಿ ಕೇಳಿ ಮನಸ್ಸು ಭಾರವಾಗಿತ್ತು. ಅವರ ಭಾವಚಿತ್ರವನ್ನು ನೋಡಿದಾಗಲಂತೂ ನನಗೆ ನನ್ನ ಹಿರಿಯಣ್ಣನನ್ನು ಕಳೆದುಕೊಂಡಂತೆ ಸಂಕಟವಾಗಿತ್ತು. ಬಳಿಕ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ ಸಿನಿಮಾ ಮಾಡಬೇಕೆಂಬ ಆಸೆ ಮೂಡಿತ್ತು' ಎಂದು ತಿಳಿಸಿದ್ದಾರೆ.

'ಸಿನಿಮಾ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಉನ್ನಿ ಕೃಷ್ಣನ್ ಅವರ ಕುಟುಂಬಸ್ಥರನ್ನು ಭೇಟಿಯಾಗಿದ್ದೆ. ಆಗ ಮೇಜರ್‌ ಸಂದೀಪ್ ಅವರ ಪೋಷಕರ ಬಳಿ ಸಿನಿಮಾ ಆಗಲಿ, ಆಗದೇ ಇರಲಿ ನಿಮ್ಮನ್ನು ಜೀವನ ಪೂರ್ತಿ ನನ್ನ ಪೋಷಕರಂತೆಯೇ ನೋಡುತ್ತೇನೆ. ಇದೊಂದು ಅವಕಾಶ ನೀಡಿ ಎಂದು ಕೇಳಿಕೊಂಡಿದ್ದೆ. ನನ್ನ ಮನವಿಗೆ ಅವರು ಒಪ್ಪಿಗೆ ಸೂಚಿಸಿದರು' ಎಂದು ಅದಿವಿ ಶೇಷ್ ಹೇಳಿದ್ದಾರೆ.

ಉನ್ನಿಕೃಷ್ಣನ್ ಅವರ ತಾಯಿ ನನ್ನನ್ನು ಅಪ್ಪಿಕೊಂಡು ನಿನ್ನಲ್ಲಿ ನನ್ನ ಮಗ ಕಾಣುತ್ತಿದ್ದಾನೆ ಎಂದು ಹೇಳಿದ್ದರು. ಆ ಕ್ಷಣವನ್ನು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ ಎಂದು ಹಂಚಿಕೊಂಡಿದ್ದಾರೆ.

Edited By : Vijay Kumar
PublicNext

PublicNext

27/11/2020 06:44 pm

Cinque Terre

74.23 K

Cinque Terre

0