ಸ್ಯಾಂಡಲ್‌ವುಡ್ ಅಂಗಳದಲ್ಲಿ ಈಗಾಗಲೇ ಭೂಗತ ಲೋಕದ ಬಗ್ಗೆ ನೈಜ ಮತ್ತು ಕಟ್ಟು ಕಥೆಗಳ ಅದೆಷ್ಟೋ ಸಿನಿಮಾಗಳು ತೆರೆ ಕಂಡು ಹೊಸ ಭಾಷ್ಯ ಬರೆದಿವೆ. ಇವುಗಳ ಪೈಕಿ ಭೂಗತ ಲೋಕದ ಹೊಸ ಕಥೆಯೊಂದು ಸಿನಿಮಾ ಆಗಿ ರೂಪುಗೊಳ್ಳುತ್ತಿದೆ.
ಹೌದು. ಭೂಗತ ಲೋಕದಲ್ಲಿ ಸದ್ದು ಮಾಡಿ ಮರೆಯಾದ ಮುತ್ತಪ್ಪ ರೈ ಬಗ್ಗೆ ಇಡೀ ವಿಶ್ವಕ್ಕೆ ಗೊತ್ತಿದೆ. ಈ ಮುತ್ತಪ್ಪ ಬಾಲ್ಯದಿಂದ ಹಿಡಿದು ಕೊನೆಯವರೆಗೂ ಗತಿಸಿದ ಪ್ರತಿ ಘಟನೆಗಳು ಹಿಸ್ಟರಿನೇ. ಅಂಡರವರ್ಲ್ಡ್ ಕಥೆಗಳನ್ನ ಸಿನಿಮಾ ಮಾಡುವಲ್ಲಿ ಸೈ ಎನಿಸಿಕೊಂಡ ನಿರ್ದೇಶಕ ರವಿ ಶ್ರೀವತ್ಸ ಸದ್ದಿಲ್ಲದೇ ಹೊಸ ಸಿನಿಮಾ ಆರಂಭಿಸಿದ್ದಾರೆ. ಅವರ ಈ ಬಾರಿಯ ಅಂಡರವರ್ಲ್ಡ್ ಕಥೆ ಎಲ್ಲದಕ್ಕಿಂತ ವಿಭಿನ್ನವಾಗಿದೆ.
ಈ ಚಿತ್ರವನ್ನು ಪ್ರೇಕ್ಷಕರು ಚಂದನವನ ಬಯೋಪಿಕ್ ಎಂದು ಸ್ವೀಕರಿಸಬಹುದು. ಅಂದಹಾಗೇ ಈ ಸಾರಿ ನಿರ್ದೇಶಕ ಶ್ರೀವತ್ಸ ಸಿನಿಮಾ ಮಾಡ್ತಿರೋದು ಈ ಮೇಲೆ ಹೇಳಿದಂತೆ ಮುತ್ತಪ್ಪ ರೈ ಜೀವನದ ಬಾಲ್ಯ ಹಾಗೂ ಕೊನೆಯ ದಿನಗಳ ಬಗ್ಗೆ.
ಮುತ್ತಪ್ಪ ರೈ ಜೀವನದ ಘಟನೆಗಳನ್ನೇ ಹೊತ್ತ ಈ ಸಿನಿಮಾಗೆ "ಎಂಆರ್" ಎಂದು ಹೆಸರಿಡಲಾಗಿದೆ. ಈಗಾಗಲೇ ಚಿತ್ರದ ಫೋಟೋಶೂಟ್ ಕಂಪ್ಲೀಟ್ ಆಗಿದ್ದು, ಚಿತ್ರಕ್ಕೆ ಶೋಭ ರಾಜಣ್ಣ ಬಂಡವಾಳ ಹೂಡಿದ್ದು, ಅವರ ಪುತ್ರನೇ ಈ ಚಿತ್ರಕ್ಕೆ ನಾಯಕ. ಈಗಾಗಲೇ ಸ್ಕ್ರಿಪ್ಟ್ ಮಾಡಿಕೊಂಡಿರುವ ಚಿತ್ರತಂಡ ಶೂಟಿಂಗ್ ತಯಾರಾಗಿದೆ.
PublicNext
27/11/2020 05:28 pm