ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಲ್ಡಿವ್ಸ್ ನಲ್ಲಿ ನಟಿ ಮಣಿಯರ ಮೋಜು ಮಸ್ತಿ : ಹೋಟೆಲ್ ದರ ಕೇಳಿದ್ರೆ ದಂಗಾಗೋದು ಗ್ಯಾರಂಟಿ!

ಬೆಂಗಳೂರು: ಮೋಜು ಮಸ್ತಿಗೆ ನಟಿಮಣಿಯರಿಗೆ ಮಾಲ್ಡಿವ್ಸ್ ಫೇವರಿಟ್ ಪ್ಲೇಸ್ ಆಗಿದೆ.

ಸ್ಯಾಂಡಲ್ ವುಡ್, ಬಾಲಿವುಡ್ ಮಾತ್ರವಲ್ಲದೆ ಇದೀಗ ಟಾಲಿವುಡ್ ನ ಸಮಂತಾ ಸಹ ಮಾಲ್ಡಿವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಹತ್ತಾರು ನಟಿಯರು ಐಲ್ಯಾಂಡ್ ಗಳಲ್ಲಿ ಮೊಕ್ಕಾಂ ಹೂಡಿದ್ದು, ಕಡಲ ಕಿನಾರೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ.

ಕೊರೊನಾ ಲಾಕ್ ಡೌನ್ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಸೆಲೆಬ್ರಿಟಿಗಳು ಸದ್ಯ ಎಂಜಾಯ್ ಮೂಡ್ ನಲ್ಲಿದ್ದಾರೆ.

ನಟಿಮಣಿಯರಿಗೆ ಬೀಚ್, ನೀರು ಎಂದರೆ ಎಲ್ಲಿಲ್ಲದ ಪ್ರೀತಿ ಹೀಗಾಗಿ ಸ್ಯಾಂಡಲ್ ವುಡ್, ಬಾಲಿವುಡ್ ಹಾಗೂ ಟಾಲಿವುಡ್ ನ ಬೆಡಗಿಯರು ಮಾಲ್ಡಿವ್ಸ್ ನ್ನು ತಮ್ಮ ಪ್ರವಾಸದ ಡೆಸ್ಟಿನೇಶನ್ ಮಾಡಿಕೊಂಡಿದ್ದಾರೆ.

ಹತ್ತಾರು ನಟಿಯರು ಮತ್ಸ್ಯ ಕನ್ಯೆಯರಂತೆ ಸಮುದ್ರ ವಿಹಾರಿಗಳಾಗಿದ್ದಾರೆ.

ಕನ್ನಡದ ಪ್ರಣೀತಾ, ಅವನೇ ಶ್ರೀಮನ್ನಾರಾಯಣ ಬೆಡಗಿ ಶಾನ್ವಿ ಶ್ರೀವಾಸ್ತವ್, ತೆಲುಗಿನ ಸಮಂತಾ ಅಕ್ಕಿನೇನಿ, ಕಾಜಲ್ ಅಗರ್ವಾಲ್ ದಂಪತಿ, ಬಾಲಿವುಡ್ ನ ರಕುಲ್ ಪ್ರೀತ್ ಸಿಂಗ್, ದಿಶಾ ಪಟಾಣಿ, ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ವರುಣ್ ಧವನ್, ಟೈಗರ್ ಶ್ರಫ್, ಮೌನಿ ರಾಯ್, ನೇಹಾ ಧುಪಿಯಾ ಸೇರಿದಂತೆ ಹತ್ತು ಹಲವು ನಟಿಯರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಹೀಗೆ ತಂಡೋಪತಂಡವಾಗಿ ಒಮ್ಮೆಲೆ ನಟಿಮಣಿಯರು ಮಾಲ್ಡಿವ್ಸ್ ಗೆ ತೆರಳಿದ್ದಾರೆ.

ಸಮುದ್ರ ಪ್ರಿಯರಿಗೆ ಮಾಲ್ಡಿವ್ಸ್ ಹೇಳಿ ಮಾಡಿಸಿದ ಸ್ಥಳ. ತುಂಬಾ ಜನ ಮಾಲ್ಡಿವ್ಸ್ ಭೇಟಿ ನೀಡಲು ಪ್ರಮುಖ ಕಾರಣ ಅಲ್ಲಿನ ಹವಾಮಾನ. ಅದರಲ್ಲೂ ನವೆಂಬರ್ ನಿಂದ ಏಪ್ರಿಲ್ ವರೆಗೆ ಈ ದ್ವೀಪ ದೇಶಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಈ ವೇಳೆ ಅಲ್ಲಿನ ತಾಪಮಾನ ಸರಾಸರಿ 29 ಡಿಗ್ರಿ ಸೆಲ್ಸಿಯಸ್ ನಿಂದ 31 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ.

ಈ ಸಮಯದಲ್ಲಿ ಮಳೆ ಹಾಗೂ ಬಿಸಿಲು ತುಂಬಾ ಕಡಿಮೆ ಹೀಗಾಗಿ ಹೆಚ್ಚು ಜನ ಭೇಟಿ ನೀಡುತ್ತಾರೆ. ಮಾಲ್ಡಿವ್ಸ್ ದ್ವೀಪಗಳ ಸಮೂಹವಾಗಿದ್ದು, ಬರೋಬ್ಬರಿ 1,190ಕ್ಕೂ ಹೆಚ್ಚು ಹವಳ ದ್ವೀಪಗಳನ್ನು ಹೊಂದಿದೆ.

ಇನ್ನೂ ವಿಶೇಷ ಎಂಬಂತೆ ಈ ದೇಶಕ್ಕೆ ಪ್ರಯಾಣಿಸುವವರಿಗಾಗಿ ನೈಸರ್ಗಿಕ ಪ್ರತ್ಯೇಕತೆಯನ್ನು ನೀಡಲಾಗುತ್ತದೆ.

ಇಲ್ಲಿನ ರೆಸಾರ್ಟ್ ಹಾಗೂ ಪ್ರವಾಸೋದ್ಯಮ ಸಂಸ್ಥೆಗಳು ಪ್ರವಾಸೋದ್ಯಮ ಸಚಿವಾಲಯದ ಮಾರ್ಗಸೂಚಿಗಳನ್ನು ಚಾಚೂತಪ್ಪದೇ ಪಾಲಿಸುತ್ತವೆ.

ಇದರಿಂದಾಗಿ ಸುರಕ್ಷತೆ ಹಾಗೂ ನೈರ್ಮಲ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತವೆ.

ಪಾಸ್ಪೋರ್ಟ್ ಹೊಂದಿದ ಭಾರತೀಯರಿಗೆ 30 ದಿನಗಳ ಉಚಿತ ವೀಸಾವನ್ನು ಸಹ ನೀಡಲಾಗುತ್ತದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲದೆ ಆರಾಮವಾಗಿ ಮಾಲ್ಡಿವ್ಸ್ ಗೆ ಭೇಟಿ ನೀಡಬಹುದಾಗಿದೆ.

ಸಾವಿರದಿಂದ ಲಕ್ಷಾಂತರ ರೂ. ದರದ ರೆಸಾರ್ಟ್ ಳಿದ್ದು, ಸಾಮರ್ಥ್ಯಕ್ಕನುಸಾರ ಬುಕ್ ಮಾಡಿಕೊಳ್ಳಬಹುದು. ಅಲ್ಲದೆ ಟ್ರಾವೆಲ್ ಏಜೆನ್ಸಿಗಳ ಮೂಲಕ ಸಹ ತೆರಳಬಹುದಾಗಿದೆ.

ಸದ್ಯ ಟಾಲಿವುಡ್ ನಟಿ ಸಮಂತಾ ಅವರು ತಂಗಿರುವ ಜೋಲಿ ಮಾಲ್ಡಿವ್ಸ್ ರೆಸಾರ್ಟ್ ನಲ್ಲಿ ಒಂದು ದಿನಕ್ಕೆ ರೂಂ ಬಾಡಿಗೆ ಬರೋಬ್ಬರಿ 1.5 ಲಕ್ಷ ರೂ.ಗಳಾಗಿವೆ.

ಇತ್ತೀಚೆಗೆ ನಟಿ ಕಾಜಲ್ ಅಗರ್ವಾಲ್ ಹಾಗೂ ಗೌತಮ್ ಕಿಚ್ಲು ಜೋಡಿ ಸಹ ಹನಿಮೂನ್ ಗಾಗಿ ಮಾಲ್ಡಿವ್ಸ್ ಗೆ ತೆರಳಿದ್ದರು. ಇವರು ಅಂಡರ್ ವಾಟರ್ ಹೋಟೆಲ್ ನಲ್ಲಿ ತಂಗಿದ್ದರು.

ಇದು ವಿಶ್ವದ ಮೊದಲ ಸಬ್ ಮರ್ಜಡ್ ಹೋಟೆಲ್ ಆಗಿದ್ದು, ಹಿಂದೂ ಮಹಾಸಾಗರದ ಮೇಲ್ಮೈಗಿಂತ 16 ಅಡಿ ಆಳದಲ್ಲಿರುವ ವಿಶ್ವದ ಮೊದಲ ಹೋಟೆಲ್ ಆಗಿದೆ.

ಕಾಜಲ್ ದಂಪತಿ ಮುರಾಕಾ ಹೋಟೆಲ್ ನಲ್ಲಿ ತಂಗಿದ್ದು, ಇದರ ಒಂದು ದಿನದ ಬಾಡಿಗೆ ಅಂದಾಜು 37.33 ಲಕ್ಷ ರೂ.ಗಳಾಗಿವೆ.

ರೆಸಾರ್ಟ್ ಳಲ್ಲಿ ಪ್ರೈವೆಸಿ ಹಾಗೂ ಉತ್ತಮ ವಾತಾವರಣ, ಯಾವುದೇ ಕಿರಿಕಿರಿ ಇಲ್ಲದ್ದರಿಂದ ಬಹುತೇಕ ನಟ, ನಟಿಯರು ಮಾಲ್ಡಿವ್ಸ್ ಗೆ ತೆರಳಲು ಇಷ್ಟಪಡುತ್ತಾರೆ. ಹೀಗಾಗಿಯೇ ಇದೀಗ ತಂಡೋಪ ತಂಡವಾಗಿ ತೆರಳಿದ್ದಾರೆ.

Edited By : Nirmala Aralikatti
PublicNext

PublicNext

26/11/2020 08:45 pm

Cinque Terre

102.1 K

Cinque Terre

2