ನಟ ಸೈಫ್ ಅಲಿ ಖಾನ್ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ . ಬಾಲಿವುಡ್ ನಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿರುವ ಅವರು ತಮ್ಮ ಬದುಕಿನ ಎಲ್ಲ ಆಸಕ್ತಿಕರ ವಿಚಾರಗಳನ್ನು ಅಭಿಮಾನಿಗಳಿಗೆ ತಿಳಿಸುವ ಉತ್ಸಾಹದಲ್ಲಿದ್ದಾರೆ. ತಮ್ಮ ಆತ್ಮಚರಿತ್ರೆಯನ್ನು ಬರೆಯಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ಅದಕ್ಕೆ ವಿಘ್ನ ಎದುರಾದಂತೆ ಕಾಣುತ್ತಿದೆ!
ತಮ್ಮ ಆಟೋಬಯೋಗ್ರಫಿ ಬರೆಯುವ ಕುರಿತು ಇತ್ತೀಚೆಗಷ್ಟೇ ಸೈಫ್ ಹೇಳಿಕೊಂಡಿದ್ದರು. ಆದರೆ ಈಗ ಬೇರೊಂದು ಸುದ್ದಿ ಕೇಳಿಬರುತ್ತಿದೆ. ಜನರ ನಿಂದನೆಗಳಿಗೆ ಹೆದರಿರುವ ಅವರು ಆತ್ಮಚರಿತ್ರೆ ಹೊರತರುವ ಕಾಯಕವನ್ನು ಕೈಬಿಡಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ ಅವರು ಆಡಿದ ಕೆಲವು ಮಾತುಗಳು ಇಂತಹ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 'ಈ ರೀತಿ ಕೃತಿ ಬರೆದಾಗ ನಾವು ತುಂಬ ಪ್ರಾಮಾಣಿಕವಾಗಿ ಇರಬೇಕು. ಅಂಥ ಪ್ರಾಮಾಣಿಕತೆಯು ಕೆಲವು ಜನರನ್ನು ಡಿಸ್ಟರ್ಬ್ ಮಾಡಬಹುದು. ಹಾಗಾಗಿ ಅವರು ಆತ್ಮಚರಿತ್ರೆ ಬರೆಯುವುದು ಯಾಕೋ ಅನುಮಾನ ಎನ್ನಲಾಗುತ್ತಿದೆ.
ಈ ಮಾತು ಹೇಳುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿ. ಆದರೂ ನಾನು ಇದನ್ನು ಹೇಳುತ್ತಿದ್ದೇನೆ. ಭಾರತದಲ್ಲಿ ಒಂದು ವರ್ಗದ ಆಡಿಯನ್ಸ್ ಇದ್ದಾರೆ. ಅವರು ತುಂಬ ನೆಗೆಟಿವ್ ಆಗಿದ್ದಾರೆ. ಅಂಥವರ ಜೊತೆ ನನ್ನ ಬದುಕಿನ ವಿವರಗಳನ್ನು ಶೇರ್ ಮಾಡಿಕೊಳ್ಳಲಾರೆ' ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ. ಇನ್ನೊಂದು ಮೂಲದ ಪ್ರಕಾರ, ಅವರು ಈ ಆತ್ಮಚರಿತ್ರೆ ಬರೆಯುವುದು ಖಚಿತ ಎನ್ನಲಾಗುತ್ತಿದೆ
PublicNext
21/11/2020 08:31 pm