ಮುಂಬೈ: ತಾರೇ ಜಮೀನ್ ಪರ್ ಖ್ಯಾತಿಯ ಬಾಲಿವುಡ್ ನಟಿ ಟಿಸ್ಕಾ ಚೋಪ್ರಾ ತನ್ನ ಕಾರಿನತ್ತ ಧಾವಿಸುತ್ತಿರುವಾಗ ಛಾಯಾಗ್ರಾಹಕರ ಮೇಲೆ ಕೋಪ ವ್ಯಕ್ತಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಟಿಸ್ಕಾ ಚೋಪ್ರಾ, ಬ್ಯಾಂಕಿನಿಂದ ಹೊರಬರುವಾಗ ಅವರನ್ನು ಛಾಯಾಗ್ರಾಹಕರು ಸುತ್ತುವರೆಯುತ್ತಾರೆ. ಮೇಡಂ ಫೋಟೋ ಪ್ಲೀಸ್ ಎಂದು ಕೇಳಿಕೊಳ್ಳುತ್ತಾರೆ. ಆದರೆ ನಟಿ ಟಿಸ್ಕಾ ಛಾಯಾಗ್ರಾಹಕರಿಂದ ದೂರ ಸರಿದು ಕೋಪದಿಂದ ತನ್ನ ಕಾರಿನತ್ತ ಸಾಗುತ್ತಾರೆ. ಈ ಮಧ್ಯೆ ದಯವಿಟ್ಟು ದೂರ ಹೋಗಿ ಎಂದು ಹೇಳುತ್ತಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
PublicNext
19/11/2020 08:05 am