ವ್ಯಾಟಿಕನ್ ಸಿಟಿ: ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ, ವ್ಯಾಟಿಕನ್ ಸಿಟಿ ಸ್ಟೇಟ್‌ನ ಸಾರ್ವಭೌಮ ಪೋಪ್ ಫ್ರಾನ್ಸಿಸ್ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು 27 ವರ್ಷದ ಬಿಕಿನಿ ಮಾಡೆಲ್ ನಟಾಲಿಯಾ ಗರಿಬೊಟ್ಟೊ ಅವರ ಫೋಟೋಗೆ ಲೈಕ್ ಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಸಣ್ಣ ಸ್ಕರ್ಟ್ ಮತ್ತು ಕ್ರಾಪ್-ಟಾಪ್ ಧರಿಸಿದ ಫೋಟೋವನ್ನು ಬ್ರೆಜಿಲ್ ಮಾಡೆಲ್ ನಟಾಲಿಯಾ ಗರಿಬೊಟ್ಟೊ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪೋಪ್ ಫ್ರಾನ್ಸಿಸ್ ಅವರ ಅಧಿಕೃತ ಇನ್‌ಸ್ಟಾ ಖಾತೆಯು ಲೈಕ್ ಮಾಡಿದೆ. ಇದನ್ನು ಸ್ಕ್ರೀನ್‌ಶಾಟ್ ತೆಗೆದು ಟ್ವೀಟ್ ಮಾಡಿರುವ ನಟಾಲಿಯಾ, "ಕನಿಷ್ಠ ನಾನು ಸ್ವರ್ಗಕ್ಕೆ ಹೋಗುತ್ತಿದ್ದೇನೆ" ಎಂದು ಗೇಲಿ ಮಾಡಿದ್ದಾರೆ. ಆದರೆ ಪೋಪ್ ತಮ್ಮ ಇನ್‌ಸ್ಟಾ ಖಾತೆಯನ್ನು ತಾವೇ ನಿಯಂತ್ರಿಸುತ್ತಾನೆರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
27 ವರ್ಷದ ನಟಾಲಿಯಾ ಹಾಟ್ ಇದೇ ವರ್ಷ ಅಕ್ಟೋಬರ್ 5ರಂದು ಪೋಸ್ಟ್ ಮಾಡಿದ ಹಾಟ್ ಫೋಟೋಗೆ ಪೋಪ್ ಫ್ರಾನ್ಸಿಸ್ ಅಷ್ಟೇ ಅಲ್ಲದೆ ಸುಮಾರು 1,41,500ಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ.
PublicNext
18/11/2020 03:18 pm