ಮುಂಬೈ: ಈ ವರ್ಷ ಮಗುವಿಗೆ ಜನ್ಮ ನೀಡಿದ 'ಸಾಂಡ್ ಕಿ ಆಂಖ್' ನಿರ್ಮಾಪಕ ನಿಧಿ ಪರ್ಮರ್ ಹೀರ್ ನಂದಾನಿ ಅವರು ನವಜಾತ ಶಿಶುಗಳಿಗೆ ಮೇ ತಿಂಗಳಿನಿಂದ ಸುಮಾರು 42 ಲೀಟರ್ ಎದೆ ಹಾಲನ್ನು ದಾನ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ನಿಧಿ ಅವರು, ನಾನು ತಾಯಿಯಾದ ಬಳಿಕ ನನಗೆ ಸಾಕಷ್ಟು ಎದೆ ಹಾಲು ಸ್ಟಾರ್ಡಮ್ ಇದೆ ಎಂದು ಭಾವಿಸಿದೆ. ಅದನ್ನು ಏನು ಮಾಡಬೇಕೆಂದು ನಾನು ತುಂಬಾ ಯೋಚಿಸಿದ್ದೆ. ಈ ಬಗ್ಗೆ ಅನೇಕ ಜನರೊಂದಿಗೆ ಮಾತನಾಡಿದ್ದೆ. ಆದರೆ ಪ್ರಯೋಜನಕ್ಕೆ ಬರಲಿಲ್ಲ. ಹೀಗಾಗಿ ಅಂತರ್ಜಾಲದಲ್ಲಿ ಹುಡುಕಲಾರಂಭಿಸಿದಾಗ ಅಮೆರಿಕದಲ್ಲಿ ಅನೇಕ 'ಸ್ತನ ಹಾಲು ಬ್ಯಾಂಕ್' ಚಾಲನೆಯಲ್ಲಿರುವುದನ್ನು ನಾನು ನೋಡಿದೆ. ಬಳಿಕ ನಾನು ಕೂಡ ನವಜಾತ ಶಿಶುಗಳಿಗೆ ಎದೆ ಹಾಲು ಕೊಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಮುಂಬೈನ ಸೂರ್ಯ ಆಸ್ಪತ್ರೆ ಕಳೆದ ಒಂದು ವರ್ಷದಿಂದ 'ಎದೆ ಹಾಲು ಬ್ಯಾಂಕ್' ನಡೆಸುತ್ತಿದೆ ಎಂಬ ಮಾಹಿತಿ ಲಭಿಸಿತ್ತು. ಆಗ ನಾನು ಅಲ್ಲಿಗೆ ಭೇಟಿ ನೀಡಿ ನಾನು ಕೂಡ ಎದೆ ಹಾಲು ನೀಡುತ್ತೇನೆ ಎಂದು ತಿಳಿಸಿದೆ. ಇದಕ್ಕೆ ಅವರು ಖುಷಿಯಾಗಿ ಒಪ್ಪಿಕೊಂಡರು. ಈ ಮೂಲಕ ಒಟ್ಟು 42 ಲೀಟರ್ ಎದೆ ಹಾಲು ದಾನ ಮಾಡಿದ್ದೇನೆ ಎಂದು ನಿಧಿ ಪರ್ಮರ್ ತಿಳಿಸಿದ್ದಾರೆ.
PublicNext
18/11/2020 01:52 pm