ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾರರ್ ಮಾನಸಿಕ ಥ್ರಿಲ್ಲರ್ ಸಿನಿಮಾ, ಮೂವರು ನಾಯಕಿಯರು ವಿಭಿನ್ನ ಪಾತ್ರ

ಸ್ಯಾಂಡಲವುಡ್ ಅಂಗಳದಲ್ಲಿ ಮಲ್ಲ, H20 ಸಿನಿಮಾದ ಪ್ರಿಯಾಂಕ ಉಪೇಂದ್ರರವರ ಪಾತ್ರವನ್ನ ಜನ ಇಂದಿಗೂ ಮರೆತಿಲ್ಲ, ಆದ್ರೆ ಇತ್ತಿಚಿಗೆ ಪ್ರಿಯಾಂಕ ಉಪೇಂದ್ರ ಅಭಿನಯದ ಪ್ರಿಯಾಂಕ, ಮಮ್ಮೀ, 2nd half, ದೇವಕಿ ಸಿನಿಮಾಗಳು ಪ್ರೇಕ್ಷಕರನ್ನು ಅಷ್ಟೇನು ಕಾಡಲಿಲ್ಲ ನೋಡಿ.

ಸದ್ಯ ಪ್ರಿಯಾಂಕ ಉಪೇಂದ್ರ ಮತ್ತೆ ಈ 'ಖೈಮರಾ' ಎಂಬ ಹಾರರ್ ಸೈಕಲಾಜಿಕಲ್ ಸಿನಿಮಾಗಾಗಿ ನಟಿಯರಾದ ಪ್ರಿಯಾಮಣಿ, ಛಾಯಾ ಸಿಂಗ್ ಜೊತೆಯಾಗಿದ್ದು ಮೂವರ ಅಭಿನಯದ ಸಿನಿಮಾ ಕ್ರೇಜ್ ಹೆಚ್ಚಿಸಿದೆ.

ಈ ಸಿನಿಮಾ ಮೂಲಕವಾಗಿ ಮೂಲಕ ತಮಿಳು ನಿರ್ದೇಶಕ ಗೌತಮ್ ವಿ.ಪಿ ಅವರ ಕನ್ನಡ ಚಿತ್ರರಂಗಕ್ಕೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಇವರ ಜೊತೆಗೆ ತಮಿಳು ನಟ-ಚಲನಚಿತ್ರ ನಿರ್ಮಾಪಕ ವಿ ಮಥಿಯಾಲಗನ್ ಅವರು ಸಹ ಕನ್ನಡ ಚಿತ್ರರಂಗಕ್ಕೆ ಬರಲಿದ್ದಾರೆ.

ಈ ಸಿನಿಮಾ ಬಗ್ಗೆ ಹೇಳೊದಾದ್ರೆ ಇದೊಂದು ಭಯಾನಕ ಅಂಶಗಳನ್ನು ಹೊಂದಿರುವ ಮಹಿಳಾ ಕೇಂದ್ರಿತ ಮಾನಸಿಕ ಥ್ರಿಲ್ಲರ್ ಆಗಿದ್ದ ಪ್ರಿಯಾಮಣಿ, ಪ್ರಿಯಾಂಕಾ ಉಪೇಂದ್ರ ಮತ್ತು ಛಾಯಾ ಸಿಂಗ್ ಮೂವರೂ ವಿಭಿನ್ನ ಅವತಾರಗಳನ್ನ ಪ್ರದರ್ಶಿಸುವ ಪಾತ್ರಗಳನ್ನು ಹೊಂದಿದ್ದಾರೆ.

ಈ ಸಿನಾಮಾಕೆ ಪಿ.ವಿಮಲ್ ಚಿತ್ರಕಥೆ ಬರೆದಿದ್ದು ಗುರು ಕಿರಣ್ ಮತ್ತು ವಿಷ್ಣು ರಾಮಕೃಷ್ಣ ಸಂಗೀತ ನೀಡಿದ್ದಾರೆ, ಬರುವ ಡಿಸೆಂಬರ್ ತಿಂಗಳಲ್ಲಿ ಸಿನಿಮಾ ಚಿತ್ರಿಕರಣ ಆರಂಭವಾಗಲಿದ್ದು ರಿಯಲ್ ಸ್ಟಾರ್ ಉಪೇಂದ್ರ ಪ್ರಿಯಾಂಕ ಜನ್ಮದಿನದ ನಿಮಿತ್ತ ಖೈಮರ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

Edited By : Nirmala Aralikatti
PublicNext

PublicNext

13/11/2020 02:15 pm

Cinque Terre

46.55 K

Cinque Terre

0