ಲವ್ ಮಾಕ್ಟೇಲ್ ಜೋಡಿಯ ಮದುವೆ ಫಿಕ್ಸ್
ಲವ್ ಮಾಡುತ್ತಲೇ ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟಿಸಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿಯ ಮದುವೆ ಫಿಕ್ಸ್ ಆಗಿದೆ. ಬರುವ ವರ್ಷ ಪ್ರೇಮಿಗಳ ದಿನದಂದೇ ಇವರು ದಂಪತಿಯಾಗಲಿದ್ದಾರೆ.
ಈ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿ ಫೋಟೋ ಪೋಸ್ಟ್ ಮಾಡಿರುವ ಡಾರ್ಲಿಂಗ್ ಕೃಷ್ಣ ನಮ್ಮ ಮದುವೆ 14 ಫೆಬ್ರುವರಿ 2021ರಂದು. ನಮ್ಮನ್ನು ಆಶೀರ್ವದಿಸಿ ಎಂದಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ಮದುವೆ ನಡೆಯಲಿದೆ. ಲವ್ ಮಾಕ್ಟೇಲ್ ಭಾಗ 2ರ ಶೂಟಿಂಗ್ ನಲ್ಲಿ ಈ ಜೋಡಿ ಸದ್ಯ ಬ್ಯುಸಿಯಾಗಿದೆ. ಈ ಸಿನಿಮಾ ಕೂಡ ಮುಂದಿನ ವರ್ಷ ತೆರೆಕಾಣಲಿದೆ.
PublicNext
03/11/2020 07:40 pm