ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯ ನಟ ಎಚ್.ಜಿ ಸೋಮಶೇಖರ್ ರಾವ್ ನಿಧನ

ನಟ ದತ್ತಣ್ಣ ಅವರ ಅಣ್ಣ ಹಾಗೂ ಹಿರಿಯ ರಂಗಕರ್ಮಿಯಾಗಿದ್ದ ಎಚ್ ಜಿ ಸೋಮಶೇಖರ್ ರಾವ್ ನಿಧನರಾಗಿದ್ದಾರೆ‌. ಅವರಿಗೆ 86 ವರ್ಷ ವಯಸ್ಸಾಗಿತ್ತು. ಧಾರಾವಾಹಿ, ಸಿನಿಮಾಗಳಿಗಿಂತ ಹೆಚ್ಚಾಗಿ ರಂಗಭೂಮಿಯಲ್ಲಿ ಸೋಮಶೇಖರ್ ರಾವ್ ಹೆಚ್ಚಾಗಿ ಶ್ರಮ ಹಾಕಿದ್ದರು‌. ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು 1972ರಲ್ಲಿ ತೆರೆಕಂಡ ಹೃದಯ ಸಂಗಮ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಸಹೋದರ ದತ್ತಣ್ಣ ಅವರೊಂದಿಗೆ ಅಭಿನಯಿಸಿದ ಹರಕೆಯ ಕುರಿ ಚಿತ್ರದ ಪೋಷಕ ಪಾತ್ರಕ್ಕೆ ಸೋಮಶೇಖರ್ ಅವರಿಗೆ "ಅತ್ಯುತ್ತಮ ಪೋಷಕ ನಟ" ರಾಜ್ಯ ಪ್ರಶಸ್ತಿ ಬಂದಿತ್ತು.

Edited By : Nagaraj Tulugeri
PublicNext

PublicNext

03/11/2020 06:07 pm

Cinque Terre

93.52 K

Cinque Terre

7