ಬೆಂಗಳೂರು : ಕೊರೊನಾದಿಂದಾಗಿ ಚಿತ್ರಮಂದಿರಗಳ ಪಾಡು ಹೇಳತೀರದಂತ್ತಾಗಿದೆ.
ಅಕ್ಟೋಬರ್ 15ರಿಂದ ಮತ್ತೆ ಓಪನ್ ಆಗಿದ್ದವು ಆದ್ರೆ ಮೂರು ವಾರಗಳಾದರೂ ಹೆಚ್ಚಿನ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರಲು ಮುಂದಾಗುತ್ತಿಲ್ಲ.
ಅದರಲ್ಲೂ ಮಲ್ಟಿಫ್ಲೆಕ್ಸ್ ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಭಾರೀ ಕಡಿಮೆಯಾಗಿರುವುದರಿಂದ ಮಲ್ಪಿಫ್ಲೆಕ್ಸ್ ಗಳ ಆದಾಯಕ್ಕೆ ದ ಮೇಲೆ ತೀವ್ರ ಹೊಡೆತ ಬಿದ್ದಿದೆ.
ಹೀಗಾಗಿ, ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಸೆಳೆಯಲು ಇದೀಗ ಮಲ್ಟಿಪ್ಲೆಕ್ಸ್ ವಿನೂತನ ಐಡಿಯಾ ಮಾಡಿದೆ.
ಪಿವಿಆರ್ ಸಿನಿಮಾಸ್ ಹೊಸ ಪ್ರಯೋಗಕ್ಕೆ ಮುಂದಾಗಿದೆ. 1,200 ರೂಪಾಯಿ ಇದ್ದ ಗೋಲ್ಡ್ ಕ್ಲಾಸ್ ಟಿಕೆಟ್ ಬೆಲೆಯನ್ನು ಕೇವಲ 165 ರೂ.ಗೆ ಇಳಿಸಲಾಗಿದೆ.
300 ರಿಂದ 600 ರೂ. ಇದ್ದ ಪ್ರೀಮಿಯಂ ಕ್ಲಾಸ್ ಟಿಕೆಟ್ ಬೆಲೆಯನ್ನು ಕೇವಲ 85 ರೂ.ಗೆ ಇಳಿಕೆ ಮಾಡಲಾಗಿದೆ! ಅಚ್ಚರಿಯಾದರೂ ಇದು ಸತ್ಯ.
ಮಲ್ಪಿಫ್ಲೆಕ್ಸ್ ಗಳಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ ಪ್ರೇಕ್ಷಕರು ಆಗಮಿಸುತ್ತಿಲ್ಲ.
ಹೀಗಾಗಿ, ಮತ್ತೆ ಮಲ್ಟಿಫ್ಲೆಕ್ಸ್ಗಳತ್ತ ಸೆಳೆಯಲು ಮುಂದಾಗಿರುವ ಪಿವಿಆರ್ ಸಿನಿಮಾಸ್ ಆಕರ್ಷಕ ಆಫರ್ ಗಳನ್ನು ನೀಡಿದೆ.
PublicNext
02/11/2020 02:01 pm