ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2 ಈಗಾಗಲೇ ಚಿತ್ರೀಕರಣ ಆರಂಭಿಸಿರುವ ಈ ಚಿತ್ರತಂಡವನ್ನು ನವೆಂಬರ್ನಲ್ಲಿ ಸೇರಿಕೊಳ್ಳಲಿದ್ದಾರೆ ಅಂಜಯ್ ದತ್, ಅಧೀರನ ಪಾತ್ರಕ್ಕಾಗಿ ಸಂಜಯ್ ಈಗಾಗಲೇ ತಯಾರಿ ಆರಂಭಿಸಿದ್ದಾರೆ.
ಕನ್ನಡದ ಸ್ಟಾರ್ ನಟ ಯಶ್ ಈಗಾಗಲೇ ಕೆಜಿಎಫ್ ಚಿತ್ರದ ಮುಂದುವರಿದ ಭಾಗದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಆದರೆ, ಕೊರೋನಾ ಬಿಕ್ಕಟ್ಟಿನಿಂದಾಗಿ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ, ಇದೀಗ ಮತ್ತೆ ಚಿತ್ರೀಕರಣ ಆರಂಭವಾಗಿದ್ದು, ಮಹತ್ವದ ಪಾತ್ರ ನಿರ್ವಹಿಸಬೇಕಿದ್ದ ಸಂಜಯ್ ದತ್ ಚಿತ್ರೀಕರಣಕ್ಕೆ ಲಭ್ಯರಾಗುತ್ತಾರಾ? ಎಂಬ ಪ್ರಶ್ನೆ ಚಿತ್ರ ತಂಡವನ್ನು ಬಹುವಾಗಿ ಕಾಡಿತ್ತು. ಆದರೆ, ಈ ಎಲ್ಲಾ ಪ್ರಶ್ನೆಗಳಿಗೂ ನಟ ಸಂಜಯ್ ದತ್ ಇಂದು ಉತ್ತರ ನೀಡಿದ್ದಾರೆ.
ನವೆಂಬರ್ ತಿಂಗಳಲ್ಲಿ ಕೆಜಿಎಫ್ ಚಿತ್ರತಂಡದೊಂದಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿರುವ ನಟ ಸಂಜಯ್ ದತ್, "ತಾವು ಅಧೀರ ಎಂಬ ಪಾತ್ರಕ್ಕಾಗಿ ಗಡ್ಡವನ್ನೂ ಬೆಳೆಸುತ್ತಿದ್ದೇನೆ. ಅಲ್ಲದೆ, ಪಾತ್ರಕ್ಕಾಗಿ ತೂಕವನ್ನೂ ಹೆಚ್ಚಿಸಿಕೊಳ್ಳುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಂ ಹಾಖಿಮ್ ಅವರ ಬಳಿ ಹೇರ್ ಕಟ್ ಮಾಡಿಸಿಕೊಂಡಿರುವ ಸಂಜಯ್ ದತ್, ಕೆಜಿಎಫ್ 2 ಸಿನಿಮಾಗಾಗಿ ಮಾಡುತ್ತಿರುವ ಸಿದ್ಧತೆ ಬಗ್ಗೆ ಹೇಳಿಕೊಂಡಿದ್ದಾರೆ.
ಈಗಾಗಲೇ ದೇಹದ ತೂಕ ಹೆಚ್ಚಿಸಿಕೊಳ್ಳುತ್ತಿದ್ದು, ಜೊತೆಗೆ ಮಸಲ್ ಸಹ ಬೆಳೆಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಸಂಜಯ್ ದತ್ ನಿರ್ವಹಿಸಲಿರುವ ಅಧೀರನ ಪಾತ್ರದಲ್ಲಿ ಉದ್ದದ ಗಡ್ಡ ಬೆಳೆಸುತ್ತಿರುವ ಸಂಜಯ್ ದತ್ ಕ್ಯಾನ್ಸರ್ಗೆ ಚಿಕಿತ್ಸೆ ಸಹ ತೆಗೆದುಕೊಳ್ಳುತ್ತಿದ್ದಾರೆ.
ಕೆಜಿಎಫ್ ಅಲ್ಲದೆ, ಅಕ್ಷಯ್ ಕುಮಾರ್ ಹಾಗೂ ಮನುಷಿ ಚಿಲ್ಲರ್ ಜೊತೆಗಿನ ಐತಿಹಾಸಿಕ ಚಿತ್ರದಲ್ಲೂ ಸಂಜಯ್ ದತ್ ನಟಿಸಲಿದ್ದು, ದೀಪಾವಳಿ ಹಬ್ಬದ ನಂತರ ಈ ಚಿತ್ರದ ಚಿತ್ರೀಕರಣವೂ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
PublicNext
15/10/2020 12:54 pm