ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫಿಲಿಪ್ಪೀನ್ಸ್ ಭಾಷೆಯಲ್ಲಿ ಬರ್ತಿದೆ ಕನ್ನಡದ ಯೂಟರ್ನ್ ಸಿನಿಮಾ !

ಕನ್ನಡದ ಯಂಗ್ ನಿರ್ದೇಶಕ ಪವನಕುಮಾರ್ ಗೊತ್ತಲ್ಲ ತನ್ನ ಹೊಸ ಆಲೋಚನೆಗಳ ಮೂಲಕ ವಿಭಿನ್ನ ಸಿನಿಮಾ ಸೃಷ್ಟಿಸಿ ಲೂಸಿಯಾ ಫಿಲ್ಮ್ ಫೇರ್ ಬೆಸ್ಟ್ ಡೈರೆಕ್ಟರ್ ಹಾಗೂ ಒಂದು ಮೊಟ್ಟೆಯ ಕಥೆ ಬೆಸ್ಟ್ ಫಿಲ್ಮ್ ಫೇರ್, ಹಾಗೇ ನೋಡುಗರನ್ನು ಒಂದು ಕಾಲದಲ್ಲಿ ಸೆರೆ ಹಿಡಿದಿದ್ದ ಯೂ ಟರ್ನ್ ಚಿತ್ರದ ಬೆಸ್ಟ್ ಸ್ಟೋರಿ ಫಿಲ್ಮ್ ಫೇರ್ ಪ್ರಶಸ್ತಿ ಪುರಸ್ಕೃತ.

ಮೊನ್ನೆ ಹಿಂದಿ ಹೇರಿಕೆ ವಿರುದ್ಧ ಸಿನಿಮಾ ಮಾಡ್ತಿನಿ ಅದು ನನ್ನೊಬ್ಬನಿಂದಲೇ ಸಾಧ್ಯವಿಲ್ಲ ನಿಮ್ಮ ಸಹಕಾರ ಬೇಕೆಂದು ಫೇಸ್ಬುಕ್ ನಲ್ಲಿ ಲೈವ್ ಬಂದು ಸುದ್ಧಿಯಾಗಿದ್ದ ಪವನ್ ಮತ್ತೆ ಯೂ ಟರ್ನ್ ಮೂಲಕ ಸುದ್ದಿಯಾಗಿದ್ದಾರೆ, ಏನಪ್ಪಾ ಇವ್ರು ಹಿಂದಿ ಹೇರಿಕೆ ವಿಚಾರದಿಂದ ಹಿಂದೆ ಸರಿದ್ರೂ ಅನಕೊಂಡ್ರಾ ಇಲ್ಲಾ ರೀ.

ಪವನಕುಮಾರ್ ನಿರ್ದೆಶನದ ಯೂ ಟರ್ನ್ ಸಿನಿಮಾ ಫಿಲಿಪ್ಪೀನ್ಸ್ ದೇಶದ ಫಿಲಿಪ್ಪಿನೋ ಭಾಷೆಗೆ ರೀಮೆಕ್ ಆಗಿದೆ, ಈಗಾಗಲೇ ಚಿತ್ರದ ಪೋಸ್ಟರ್ ಹೊರಬಂದಿದ್ದು ಕನ್ನಡದ ಸಿನಿಮಾವೊಂದು ಫಿಲಿಪ್ಪೀನ್ಸ್ ದೇಶದಲ್ಲಿ ಬಿಡುಗಡೆಯಾಗುತ್ತಿರುವ ಖುಷೀ ಜೊತೆ ಈ ಸಿನಿಮಾ ಅಲ್ಲಿನ ಜನರಲ್ಲಿ ಎಂತಹ ಕ್ರೇಜ್ ಸೃಷ್ಟಿಸಲಿದೆ ಎಂಬುದು ಅಷ್ಟೇ ಉತ್ಸಾಹಕ್ಕೆ ಕಾರಣವಾಗಿದೆ.

ಇದೇ ತಿಂಗಳ 30 ರಂದು ಸಿನಿಮಾ ಬಿಡುಗಡೆಗೆ ಆಗಲಿದ್ದು ಫಿಲಿಪ್ಪೀನ್ಸ್ ಭಾಷೇಯಲ್ಲೂ ಮೂಲ ಹೆಸರನ್ನೇ ಉಳಿಸಿಕೊಂಡಿರುವ ಸಿನಿಮಾಗೆ 'ಡೆರಿಕ್ ಕ್ಯಾಬ್ರಿಡೊ' ಎಂಬುವರು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು 'ಕಿಮ್ ಚುವೊ' ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ತೆಲುಗು, ತಮಿಳು ಭಾಷೆಯಲ್ಲಿ ಸದ್ದು ಮಾಡಿದ ಸಿನಿಮಾ ಯೂ ಟರ್ನ್ ಫಿಲಿಪ್ಪೀನ್ಸ್ ಭಾಷೆಯಲ್ಲಿ ಏನು ಕರಾಮತ್ತು ಮಾಡತ್ತೋ ಕಾದು ನೋಡಬೇಕಿದೆ.

Edited By :
PublicNext

PublicNext

14/10/2020 05:42 pm

Cinque Terre

41.59 K

Cinque Terre

1