ಹಿರಿಯೂರು : ಭಾರೀ ಮಳೆಯಿಂದಾಗಿ ಹಿರಿಯೂರು ಸಮೀಪ ಹೆದ್ದಾರಿಗೆ ಕಾಮಗಾರಿ ಮಣ್ಣು ರಸ್ತೆಗೆ ಹರಿದು ಸುಮಾರು ಹತ್ತು ಕಿ.ಮೀ ಟ್ರಾಫಿಕ್ ಜಾಮ್ ಆಗಿರುವ ಘಟನೆ ನಡೆದಿದೆ.
ಬೆಂಗಳೂರು ಪೂನಾ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಗೊರ್ಲಡ್ಕು ಬಳಿ ಹೆದ್ದಾರಿಯಲ್ಲಿ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದ್ದು, ವಾಹನಗಳನ್ನು ಸರ್ವೀಸ್ ರಸ್ತೆಯಲ್ಲಿ ಬಿಡಲಾಗುತ್ತಿತ್ತು. ಆದರೆ, ಹೆದ್ದಾರಿಯಲ್ಲಿ ಸುರಿದಿದ್ದ ಮಣ್ಣಿನ ರಾಶಿ ಸರ್ವೀಸ್ ರಸ್ತೆಗೆ ಬಂದು ಜಮಾವಣೆ ಆಗಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ಬೆಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆ ಹೋಗುವ ಮಾರ್ಗದಲ್ಲಿ ಸುಮಾರು ಹತ್ತು ಕಿ.ಮೀ ಟ್ರಾಫಿಕ್ ಜಾಮ್ ಆಗಿದೆ.
ಹೆದ್ದಾರಿ ಸಮಸ್ಯೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
PublicNext
05/10/2024 09:01 pm