ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ವರದಕ್ಷಿಣೆ ಕಿರುಕುಳ - ಪ್ರಕರಣ ದಾಖಲು

ಚಳ್ಳಕೆರೆ: ಪತಿ ಹಾಗೂ ಆತನ ಸಂಬಂಧಿಗಳು ವರದಕ್ಷಣೆ ಕಿರುಕುಳ ನೀಡಿ ದೌರ್ಜನ್ಯ ವೆಸಗುತ್ತಿದ್ದಾರೆ ಎಂದು ಆರೋಪಿಸಿ ವೆಂಕಟೇಶ್ವರ ನಗರದ ನಿವಾಸಿ ಮೌಲಾನಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನೊಂದ ಗೃಹಿಣಿ ಮೌಲಾನಬಿ ಕಳೆದ 2023 ರಲ್ಲಿ ಅಂಬೇಡ್ಕರ್‌ ನಗರದನಿವಾಸಿ ಮಹಮ್ಮದ್ ಇರ್ಫಾನ್ ಅವರನ್ನು ಮದುವೆಯಾಗಿದ್ದು, ಒಂದು ವರ್ಷ ಕಾಲ ಗಂಡ, ಹೆಂಡತಿ ಅನ್ಯೂನ್ಯವಾಗಿದ್ದರು. ಮದುವೆ ಸಂದರ್ಭದಲ್ಲಿ 2ಲಕ್ಷ ಹಣಕ್ಕೆ ಇರ್ಫಾನ್ ಕಡೆಯವರು ಬೇಡಿಕೆ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಕೊಡುವ ಭರವಸೆಯನ್ನು ಮೌಲಾನಬಿ ಪೋಷಕರು ನೀಡಿದ್ದರು.

ಮೌಲಾನಬಿ ಗರ್ಭಿಣಿಯಾಗಿದ್ದು, ಪತಿ ಮಹಮ್ಮದ್ ಇರ್ಫಾನ್ ಆಕೆಯನ್ನು ತವರು ಮನೆಗೆ ಹೆರಿಗೆಗೆ ಬಿಟ್ಟು ಬಂದು ಈಗ ಮತ್ತೊಂದು ಮದುವೆಯಾಗಿದ್ದಾನೆ. ಈ ಬಗ್ಗೆನೊಂದ ಪತ್ನಿ, ಪತಿ ಮಹಮ್ಮದ್ ಇರ್ಫಾನ್, ಸಜನಾಭಾನು, ಜೀನ ತಮ್ಮ, ಖಲೀಂವುಲ್ಲಾ, ಮಹಮ್ಮದ್ ರಫೀ, ಅನ್ವರಿ, ಇಮ್ರಾನ್, ರುಹಿನಾಭಾನು, ಶಫೀವುಲ್ಲಾ, ಸಾಹಿರ ಬಾಬು, ದೀಲ್‌ಶಾದ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಪಿಎಸ್‌ಐ ಕೆ.ಸತೀಶ್ ನಾಯ್ಕ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

20/11/2024 10:54 pm

Cinque Terre

14.5 K

Cinque Terre

0

ಸಂಬಂಧಿತ ಸುದ್ದಿ