ಚಳ್ಳಕೆರೆ : ತಾಲೂಕಿನಲ್ಲಿ ಅತಿವೃಷ್ಟಿ ಮಳೆಯಿಂದ ಶೇಂಗಾ ಬೆಳೆ ಕುಂಠಿತವಾಗಿದ್ದರೂ ತೊಗರಿ ಸಮೃದ್ದಿಯಾಗಿ ಬೆಳೆದಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಜೆ. ಅಶೋಕ್ ಹೇಳಿದರು.
ಚಳ್ಳಕೆರೆ ತಾಲೂಕಿನ ಬಿಟ್ಟಿಪ್ಪನಹಳ್ಳಿ ಗ್ರಾಮದ ತೊಗರಿ ಬೆಳೆದ ಜಮೀನುಗಳಿಗೆ ಭೇಟಿ ನೀಡಿ ಮಾತನಾಡಿ, ಸ್ಥಳೀಯ ರೈತರಲ್ಲಿ ತೊಗರಿ ಬೆಳೆ ಆಸಕ್ತಿ ಕಾಣುತ್ತೇವೆ. ಇದೊಂದು ವಾಣಿಜ್ಯ ಬೆಳೆಯಾಗಿ ಮತ್ತು ರೈತರಿಗೆ ಆರ್ಥಿಕ ಬಲವರ್ಧನೆಯಾಗಿದೆ. ಮೂರರಿಂದ ನಾಲ್ಕು ಸಾವಿರ ಎಕರೆಯಲ್ಲಿ ಬಿತ್ತನೆ ಪ್ರಮಾಣವಿದ್ದ ತಾಲೂಕಿನಲ್ಲಿ ಪ್ರಸಕ್ತ ವರ್ಷ (11.700) ಹೆಕ್ಟರ್ ಬಿತ್ತನೆಯಾಗಿದೆ. ಅತಿ ಸೂಕ್ಷ್ಮ ಬೆಳೆಯಾಗಿರುವ ತೊಗರಿ ಪೋಷಣೆ ಮಾಡಿಕೊಳ್ಳಲು ರೈತರಲ್ಲಿ ಜಾಗೃತಿ ಇರಬೇಕು. ಕೀಟ ಬಾಧೆ ಬಹಳ ಕಡಿಮೆ ಇದೆ. ಅಲ್ಲಲ್ಲಿ ಕಾಣಿಸಿಕೊಂಡಿರುವ ಕೀಟ ಬಾಧೆಗೆ ಇಲಾಖೆಯಿಂದ ಔಷಧಿ ವಿತರಿಸಲಾಗುತ್ತಿದೆ. ಇದನ್ನು ಮಿತ ಪ್ರಮಾಣದಲ್ಲಿ ಸಿಂಪಡಣೆ ಮಾಡಬೇಕು ಎಂದು ತಿಳಿಸಿದ್ದರು .
Kshetra Samachara
20/11/2024 06:06 pm