ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರೈಸ್ತರಿಂದ ಆಲ್‌ ಸೋಲ್ಸ್‌ ಡೇ ಆಚರಣೆ

ಚಿಕ್ಕಮಗಳೂರು: ಮರಣ ಹೊಂದಿದ ಕುಟುಂಬಸ್ತರನ್ನು ಕ್ರೈಸ್ತರು ಸ್ಮರಿಸುವ ಸಂಪ್ರದಾಯವಿದ್ದು, ಅದರಂತೆ ಮೃತಪಟ್ಟ ಭಕ್ತ ವಿಶ್ವಾಸಿಗಳ ಸ್ಮರಣೆ ದಿನ (ಆಲ್‌ ಸೋಲ್ಸ್‌ ಡೇ)ವನ್ನು ಕೂದುವಳ್ಳಿಯಲ್ಲಿ ಇಂದು ಆಚರಿಸಲಾಯಿತು. ಸಮಾಧಿ ಸ್ಥಳಗಳನ್ನು ಶುಚಿಗೊಳಿಸಿ ಹೂ ಗಳನ್ನು ಅರ್ಪಿಸಿ ಧರ್ಮಗುರುಗಳಿಂದ ಆಶೀರ್ವಚನ, ಶುದ್ಧೀಕರಣ, ಮೋಂಬತ್ತಿಗಳನ್ನಿಟ್ಟು ಸಾರ್ವತ್ರಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಅಗಲಿದ ಆತ್ಮಗಳನ್ನು ಸ್ಮರಿಸಲಾಯಿತು. ಸಮಾಜದಲ್ಲಿ ಬಾಳಿ ಬದುಕಿದ ಸಂದರ್ಭದಲ್ಲಿ ಆದರ್ಶ ಜೀವನ ನಡೆಸಿದವರು ಸ್ವರ್ಗಸ್ಥರಾಗುತ್ತಾರೆ. ಉಳಿದ ಆತ್ಮಗಳು ಶುದ್ಧೀಕರಣ ಸ್ಥಿತಿಯಲ್ಲಿರುತ್ತವೆ ಎನ್ನುವುದು ಕ್ರೈಸ್ತರ ನಂಬಿಕೆ. ಅಂತಹ ಆತ್ಮಗಳು ಸ್ವರ್ಗ ಸೇರಲು ಅವರಿಗಾಗಿ ಸಮೂಹ ಪ್ರಾರ್ಥನೆ ನಡೆಸುವ ದಿನವಾಗಿದೆ.

Edited By : PublicNext Desk
Kshetra Samachara

Kshetra Samachara

02/11/2024 06:40 pm

Cinque Terre

1.32 K

Cinque Terre

0

ಸಂಬಂಧಿತ ಸುದ್ದಿ