ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾ ಸಂಸ್ಥೆಗಳು ಫಲಿತಾಂಶದ ಪೈಪೋಟಿಗೆ ಬಿದ್ದಿರುವ ದಿನಮಾನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿರುವ ಪ್ರಬೋದಿನಿ ವಿದ್ಯಾ ಸಂಸ್ಥೆಯೂ ವಿಶೇಷವಾಗಿ ಗುರುತಿಸಿಕೊಂಡಿದೆ.
ವಿದ್ಯಾರ್ಥಿಗಳನ್ನು ಭವಿಷ್ಯದ ಉತ್ತಮ ಪ್ರಜೆಗಳನ್ನು ಮಾಡುವ ನಿಟ್ಟಿನಲ್ಲಿ ಶಿಕ್ಷಣದ ಜೊತೆಗೆ ಮಕ್ಕಳಿಗೆ ರಾಷ್ಟ್ರೀಯತೆಯ ಪಂಚಕೋಶ ಶಿಕ್ಷಣವನ್ನು ನೀಡಲಾಗುತ್ತಿದೆ. ಭಗವದ್ಗೀತೆ ಹಾಗೂ ಶ್ಲೋಕಗಳೊಂದಿಗೆ ಕಲೆ ಮತ್ತು ಸಾಂಸ್ಕೃತಿಕ ಕಲಿಕೆಗಳನ್ನು ಪ್ರತಿನಿತ್ಯ ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ.
ಈ ಶಾಲೆಯ 3ನೇ ತರಗತಿಯ ಪ್ರಣೀಕ್ ಎಂಬ ವಿದ್ಯಾರ್ಥಿ ವಿಶೇಷ ಪ್ರತಿಭೆಯನ್ನು ಹೊಂದಿದ್ದು ಭಗವದ್ಗೀತೆಯ ಶ್ಲೋಕಗಳನ್ನು ಹಾಗೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ, ರಾಜಕೀಯ, ಸಿನಿಮಾ ಮಾಹಿತಿಗಳನ್ನು ನಿರರ್ಗಳವಾಗಿ ಕ್ಷಣ ಮಾತ್ರದಲ್ಲಿ ಹೇಳುತ್ತಾನೆ. ಹೀಗಾಗಿ ಇಂದು ಶೃಂಗೇರಿಯ ಶಾರದ ಮಠದಲ್ಲಿ ನಡೆಯಲಿರುವ ಭಾರತೀ ತೀರ್ಥ ಸ್ವಾಮೀಜಿಗಳ ಸನ್ಯಾಸತ್ವ ಸ್ವೀಕಾರದ 50ನೇ ವರ್ಷದ ಸುವರ್ಣ ಮಹೋತ್ಸವದಲ್ಲಿ ಸ್ತೋತ್ರ ತ್ರಿವೇಣಿ, ಕಲ್ಯಾಣವೃಷ್ಠಿತ್ಸವ ಶಿವಪಂಚಾಕ್ಷರ ನಕ್ಷತ್ರ ಮಾಲ, ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರಗಳ ಸಂಗಮಗಳ ಶ್ಲೋಕಗಳನ್ನು 3ನೇ ತರಗತಿ ಬಾಲಕ ಪಠಣ ಮಾಡಲಿದ್ದು ಪುಟ್ಟ ವಯಸ್ಸಿನಲ್ಲಿ ವಿಶಿಷ್ಟ ಪ್ರತಿಭೆ ಹೊಂದಿರುವ ಬಾಲಕನಿಗೆ ಶಿಕ್ಷಕರು, ಪೋಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Kshetra Samachara
11/01/2025 02:54 pm