ಚಿಕ್ಕಮಗಳೂರು: ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ನಗರದ ಸೇಂಟ್ ಮೇರಿಸ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ನವನೀತ್ ರಾಜ್ ಕೆ ನೂರು ಮೊತ್ತದ ಲೆಕ್ಕಾಚಾರವನ್ನು 5 ನಿಮಿಷದಲ್ಲಿ ಬಿಡಿಸುವುದರಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಇವರು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರಸ್ವಾಮಿ ಡಿ ಮತ್ತು ಶಿಕ್ಷಕಿ ರಾಣಿ ಮಂಜುಳಾ ದೇವಿ ಅವರ ಪುತ್ರನಾಗಿದ್ದಾರೆ.
Kshetra Samachara
31/10/2024 03:30 pm