ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಿಗೆರೆ: ಬೈಕಿಗೆ ಅಡ್ಡ ಬಂದ ಬೀದಿ ನಾಯಿ ಆಯತಪ್ಪಿ ಬಿದ್ದು ಸವಾರ ಸಾವು

ಮೂಡಿಗೆರೆ: ಬೈಕಿಗೆ ಬೀದಿನಾಯಿ ಅಡ್ಡ ಬಂದು ಅಪಘಾತ ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡಿನಲ್ಲಿ ನಡೆದಿದೆ.

ಮೃತ ಯುವಕ ಗೋಣಿಬೀಡು ಸಮೀಪದ ಆನೆದಿಬ್ಬ ನಿವಾಸಿ ಜಾಫರ್ (24) ಎಂದು ತಿಳಿದು ಬಂದಿದೆ. ಆನೆದಿಬ್ಬ ಗ್ರಾಮದ ಇಸಾಕ್ ಎಂಬುವವರ ಪುತ್ರ ಜಾಫರ್ ಬೆಟ್ಟದಮನೆಯ ಗ್ರಾಮದಲ್ಲಿ ತಾನು ಕೆಲಸ ಮಾಡಿದ್ದ ಹಣವನ್ನು ಪಡೆಯಲು ಹೋಗಿದ್ದರು ಎನ್ನಲಾಗಿದೆ. ಬೆಟ್ಟದಮನೆಯಿಂದ ವಾಪಾಸಾಗುತ್ತಿದ್ದ ವೇಳೆ ಗೋಣಿಬೀಡು ಪಟ್ಟಣ ವ್ಯಾಪ್ತಿಯಲ್ಲಿ ಬೀದಿನಾಯಿಯೊಂದು ಬೈಕಿಗೆ ಅಡ್ಡಬಂದಿದ್ದು, ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಮಗುಚಿದೆ. ಈ ಸಂದರ್ಭ ಚರಂಡಿಗೆ ಅಳವಡಿಸಿದ್ದ ಸಿಮೆಂಟ್ ಚಪ್ಪಡಿಗಳಿಗೆ ಜಾಫರ್ ತಲೆ ಹೊಡೆದಿದ್ದು, ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನಾಯಿಯೂ ಕೂಡ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

Edited By : PublicNext Desk
Kshetra Samachara

Kshetra Samachara

03/11/2024 05:26 pm

Cinque Terre

1.58 K

Cinque Terre

0

ಸಂಬಂಧಿತ ಸುದ್ದಿ