ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೋಟೆಲ್ ಗೆ ಕ್ಯಾಂಟರ್ ನುಗ್ಗಿ ತಾಯಿ ಗರ್ಭದಲ್ಲಿದಂತಹ ಮಗು ಸೇರಿ ಮೂವರ ಸಾವು

ಚಿಕ್ಕಬಳ್ಳಾಪುರ : ಪೆರೇಸಂದ್ರ ಬಳಿ ಹೆದ್ದಾರಿಯಿಂದ ಹೋಟೆಲ್ ಗೆ ಕ್ಯಾಂಟರ್ ವೊಂದು ನುಗ್ಗಿದ ಪರಿಣಾಮ ತಾಯಿ ಗರ್ಭದಲ್ಲಿದ್ದ ಮಗು ಸೇರಿ ಮೂವರ ಸಾವನ್ನಪ್ಪಿದಾರೆ.

ಹೌದು ನಿಂತಿದ್ದ ಬೈಕ್, ಕಾರುಗಳಿಗೆ ಕ್ಯಾಂಟರ್ ಡಿಕ್ಕಿಹೊಡೆದು ಬಳಿಕ ರಾಮದೇವರಗುಡಿ ಪ್ರಣವ್ ಹೋಟೆಲ್ ಗೆ ನುಗ್ಗಿದೆ. ಹೆದ್ದಾರಿಯಿಂದ ಹೋಟೆಲ್ ಗೆ ಕ್ಯಾಂಟರ್ ನುಗ್ಗುವ ದೃಶ್ಯ ಸಿಸಿಟಿವಿಯಲ್ಲಿಯೂ ಸೆರೆಯಾಗಿದೆ.

ಇದರಿಂದಾಗಿ ಚಿಕ್ಕಬಳ್ಳಾಪುರದ ರಾಮದೇವರ ಗುಡಿ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸರಣಿ ಅಪಘಾತ ಸಂಭವಿಸಿದ್ದು ,ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಹಾಗೂ ನಾಲ್ವರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆಯಲ್ಲಿ ಹೋಟೆಲ್ ಭದ್ರತಾ ಸಿಬ್ಬಂದಿ ನಾರಾಯಣಸ್ವಾಮಿ ಹಾಗೂ ಬೈಕ್ ಸವಾರ ಜನಾರ್ಧನ ಮೃತಪಟ್ಟಿದ್ದಾರೆ. ಅಲ್ಲದೆ ಗರ್ಭಾವಸ್ಥೆಯಲ್ಲಿದ್ದ ಮಗು ಮೃತಪಟ್ಟಿದ್ದು ತಾಯಿಗೆ ಗಂಭೀರ ಗಾಯಗಾಳಾಗಿವೆ.

ಇನ್ನು ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಡ್ಡ ಬಂದ ಕಾರು ತಪ್ಪಿಸಲು ಹೋಗಿ ಕ್ಯಾಂಟರ್ ಹೋಟೆಲ್ ಗೆ ನುಗ್ಗಿದೆ. ಹೋಟೆಲ್ ಮುಂದೆ ನಿಂತಿದ್ದ ಐದು ಕಾರುಗಳು ಜಖಂ ಆಗಿವೆ. ಇನ್ನು ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಲ್ಲದೇ ಕ್ಯಾಂಟರ್ ನ್ನು ವಶಕ್ಕೆ ಪಡೆದು ಚಾಲಕ ಅಜೀತ್ ನನ್ನು ಬಂಧಿಸಲಾಗಿದೆ. ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತೇವೆ ಎಂದು ತಿಳಿಸಿದಾರೆ.

Edited By :
PublicNext

PublicNext

17/09/2022 03:52 pm

Cinque Terre

26.28 K

Cinque Terre

0