ದಾವಣಗೆರೆ:ಸರ್ಕಾರಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕೊರೊನಾ ಸ್ಪೋಟಗೊಂಡಿದೆ. ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದ ಬಳಿ ಈ ವಸತಿ ಶಾಲೆ ಇದೆ. ಇಲ್ಲಿಯ ಪ್ರಚಾರ್ಯರು ಸೇರಿ 6 ರಿಂದ 10 ನೇ ತರಗತಿಯಲ್ಲಿ ಓದುತ್ತಿರೋ ಬರೋಬ್ಬರಿ 32 ಮಕ್ಕಳಿಗೆ ಕೊರೊನಾ ಪಾಸಿಟಿವಿ ದೃಢಪಟ್ಟಿದೆ.
ಸೋಂಕಿನ ಲಕ್ಷಣ ಇರೋ ನಾಲ್ವರು ಮಕ್ಕಳ್ಳನ್ನ ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನಿತರ ಮಕ್ಕಳಿಗೆ ಶಾಲೆಯಲ್ಲಿಯೇ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈಗಾಗಲೇ ವೈದ್ಯರ ತಂಡ ಮಕ್ಕಳ ಕೋವಿಡ್ ಟೆಸ್ಟ್ ಮುಂದುವರೆಸಿದೆ. ಸ್ಥಳೀಯ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಆಸ್ತ್ರೆಗೆ ಭೇಟಿ ಕೊಟ್ಟಿದ್ದಾರೆ. ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆನೂ ಸೂಚಿಸಿದ್ದಾರೆ.
PublicNext
11/01/2022 10:15 am