ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೋನ್ ಮೂಲಕವೇ ವ್ಯಾಕ್ಸಿನ್ ಪ್ರಮಾಣಪತ್ರ ಪಡೆಯಿರಿ: ಇಲ್ಲಿದೆ ಮಾಹಿತಿ

ನವದೆಹಲಿ: ನಿಮ್ಮ ಸ್ಮಾರ್ಟ್ ಫೋನ್ ಮೂಲಕ ನೀವು ಕುಳಿತಲ್ಲಿಯೇ ಕೊರೊನಾ ವ್ಯಾಕ್ಸಿನ್ ಪ್ರಮಾಣ ಪತ್ರ ಪಡೆಯಬಹುದು. ಇನ್ಮೇಲೆ ಇದು ಇನ್ನೂ ಸರಳ ವಿಧಾನ.

ಹೌದು. ಇಲ್ಲಿಯವರೆಗೆ ಕೋವಿನ್ ಪೋರ್ಟಲ್ ಗೆ ಹೋಗಿ ಮೊಬೈಲ್ ನಂಬರ್, ಒಟಿಪಿ ಹಾಕಿ ಪ್ರಮಾಣಪತ್ರವನ್ನು ಡೌನ್‍ಲೋಡ್ ಮಾಡಬೇಕಿತ್ತು. ಆದರೆ ಈಗ ವಾಟ್ಸಪ್‍ನಲ್ಲೇ ಪ್ರಮಾಣಪತ್ರವನ್ನು ಪಡೆಯಬಹುದು.

ಏನು ಮಾಡಬೇಕು? +91 90131 51515 ನಂಬರ್ ಅನ್ನು ಮೊದಲು ಸೇವ್ ಮಾಡಿ. ಬಳಿಕ ‘covid certificate” ಎಂದು ಈ ನಂಬರಿಗೆ ವಾಟ್ಸಪ್ ಮಾಡಿ. ಇದಾದ ಬಳಿಕ ನಿಮ್ಮ ಮೊಬೈಲಿಗೆ ಒಂದು ಒಟಿಪಿ ಬರುತ್ತದೆ. ಈ ಒಟಿಪಿಯನ್ನು ನಮೂದಿಸಿದರೆ ಪ್ರಮಾಣಪತ್ರ ಕೂಡಲೇ ವಾಟ್ಸಪ್‍ಗೆ ಬಂದಿರುತ್ತದೆ.

Edited By : Nagaraj Tulugeri
PublicNext

PublicNext

09/08/2021 01:11 pm

Cinque Terre

41.07 K

Cinque Terre

0