ಸಾಮಾನ್ಯವಾಗಿ ಅನೇಕರು ತಮ್ಮ ವಾಹನಗಳಿಗೆ VIP ನಂಬರ್ ಪ್ಲೇಟ್ ಪಡೆಯಲು ಇಷ್ಟಪಡ್ತಾರೆ. ಅದಕ್ಕಾಗಿ ಕೋಟಿಗಟ್ಟಲೇ ಹಣ ಖರ್ಚು ಮಾಡಲು ಸಿದ್ಧರಿರುತ್ತಾರೆ. ಅದರಂತೆ ಬ್ರಿಟನ್ ನಲ್ಲಿ ORG 45M ನಂಬರ್ ಪ್ಲೇಟ್ ಬರೋಬ್ಬರಿ 1.4 ಕೋಟಿ ರೂಪಾಯಿಗೆ ಮಾರಾಟವಾಗುತ್ತಿದೆ.
ಕೆಲವರ ಪ್ರಕಾರ ಈ ನಂಬರ್ ಪ್ಲೇಟ್ ORG 45M ಅನ್ನು ‘Orgasm’ ಎಂದು ಓದಬಹುದು. ಇದೇ ಕಾರಣಕ್ಕೆ ಈ ನಂಬರ್ ಪ್ಲೇಟ್ ಬೆಲೆ ದುಬಾರಿಯಾಗಿದೆ ಎಂದು ಹೇಳಲಾಗುತ್ತಿದೆ. 1995ರಲ್ಲಿ ಈ ನಂಬರ್ ಪ್ಲೇಟ್ ಬರೋಬ್ಬರಿ 48 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು. ಇದೀಗ ಆನ್ ಲೈನ್ ವೆಬ್ ಸೈಟ್ regtransfers.co.uk ನಲ್ಲಿ ಮತ್ತೊಮ್ಮೆ ಈ ನಂಬರ್ ಪ್ಲೇಟ್ ಮಾರಾಟವಾಗಲಿದೆ.
ಈ ಹಿಂದೆ ಇಂಗ್ಲೆಂಡ್ ನಲ್ಲಿ ‘ನಂಬರ್ 1’ ಎಂದು ಬರೆದುಕೊಂಡಿದ್ದ ಕಾರಿನ ನಂಬರ್ ಪ್ಲೇಟ್ ಬರೋಬ್ಬರಿ 95.95 ಕೋಟಿಗೆ ಮಾರಾಟವಾಗಿತ್ತು.
PublicNext
26/07/2022 10:17 pm