ಬೆಂಗಳೂರು : ಹಣದುಬ್ಬರದಿಂದ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ಕೊಂಚ ನೆಮ್ಮದಿ ಸಿಕ್ಕಿದೆ . ದೇಶದಲ್ಲಿ ಹಬ್ಬಗಳ ಋತು ಆರಂಭವಾಗಲಿರುವ ಬೆನ್ನಲ್ಲಿಯೇ ಆಹಾರ ಉತ್ಪನ್ನ ತಯಾರಕ ಖಾಸಗಿ ಕಂಪನಿ ಖಾದ್ಯ ತೈಲದ ಬೆಲೆಯಲ್ಲಿ ಲಿ.ಗೆ 30 ರೂಪಾಯಿ ಕಡಿತ ಮಾಡಿದೆ.
ಖಾಸಗಿ ಕಂಪನಿ ತನ್ನ ಆಹಾರ ಉತ್ಪನ್ನಗಳನ್ನು ಫಾರ್ಚೂನ್ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತದ ನಡುವೆ, ದೇಶೀಯ ಮಾರುಕಟ್ಟೆಯಲ್ಲಿ ಕಡಿತವನ್ನು ಘೋಷಿಸಲಾಗಿದೆ. ಕೆಲ ದಿನಗಳ ಹಿಂದೆ ತೈಲ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸರ್ಕಾರ ಸಭೆ ನಡೆಸಿ ಚಿಲ್ಲರೆ ಬೆಲೆ ಇಳಿಕೆ ಕುರಿತು ಚರ್ಚೆ ನಡೆಸಿತ್ತು. ಇದಾದ ಬಳಿಕ ಅದಾನಿ ವಿಲ್ಮರ್ ಬೆಲೆ ಇಳಿಕೆ ಮಾಡಿ ಪ್ರಕಟಣೆ ನೀಡಿದೆ.
PublicNext
18/07/2022 07:06 pm