ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಷೇರು ಪೇಟೆಯಲ್ಲಿ ಭಾರಿ ಕುಸಿತ: ಹೂಡಿಕೆದಾರರಿಗೆ ಆಘಾತ

ಮುಂಬೈ: ಇಂದು ಸೋಮವಾರ (ಜೂನ್ 13) ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಾಣಿಸಿದೆ. ಭಾರಿ ಪ್ರಮಾಣದಲ್ಲಿ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ.

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಭಾರೀ ಕುಸಿತ ಕಂಡಿದೆ. ಜೂನ್ 13ನೇ ತಾರೀಕಿನ ಸೋಮವಾರದ ಆರಂಭದ ವಹಿವಾಟಿನಲ್ಲಿ ಬೆಳಗ್ಗೆ 10 ಗಂಟೆ ಹೊತ್ತಿಗೆ ಸೆನ್ಸೆಕ್ಸ್ 1448.13 ಪಾಯಿಂಟ್ಸ್ ಅಥವಾ ಶೇ 2.67ರಷ್ಟು ಕುಸಿತ ಕಂಡು, 52,855.31 ಪಾಯಿಂಟ್ಸ್​ನಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ 414.10 ಪಾಯಿಂಟ್ಸ್ ಅಥವಾ ಶೇ 2.56ರಷ್ಟು ನೆಲ ಕಚ್ಚಿ, 15,787.70 ಪಾಯಿಂಟ್ಸ್​ನಲ್ಲಿತ್ತು. 508 ಕಂಪೆನಿಗಳ ಷೇರು ಏರಿಕೆ ದಾಖಲಿಸಿದರೆ, 2428 ಕಂಪೆನಿಯ ಷೇರು ಇಳಿಕೆಯಲ್ಲಿತ್ತು. 105 ಕಂಪೆನಿ ಷೇರುಗಳಲ್ಲಿ ಯಾವುದೇ ದರ ಬದಲಾವಣೆ ಆಗಲಿಲ್ಲ. ವಲಯವಾರು ಗಮನಿಸಿದರೆ, ಬಿಎಸ್​ಇ ಮತ್ತು ಎನ್​ಎಸ್​ಇ ಎರಡರಲ್ಲೂ ಎಲ್ಲ ವಲಯಗಳೂ ಕುಸಿತ ದಾಖಲಿಸಿದ್ದವು.

ನಿಫ್ಟಿ ಸೂಚ್ಯಂಕದಲ್ಲಿ ಪಿಎಸ್​ಯು ಬ್ಯಾಂಕ್ ಶೇ 3.33ರಷ್ಟು ನಷ್ಟ, ಮಾಹಿತಿ ತಂತ್ರಜ್ಞಾನ ಶೇ 3.16ರಷ್ಟು ನಷ್ಟ ಕಂಡಿವೆ. ತಜ್ಞರ ಪ್ರಕಾರ ಅಲ್ಪಾವಧಿಯಲ್ಲಿ ಮಾರುಕಟ್ಟೆ ಟ್ರೆಂಡ್ ದುರ್ಬಲವಾಗಿದೆ. ಅಮೆರಿಕದ ಮೇ ತಿಂಗಳ ಹಣದುಬ್ಬರ ಶೇ 8.3ರಷ್ಟಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ಶೇ 8.6ರಷ್ಟಾಗಿದೆ. ಇದರಿಂದಾಗಿ ಅಲ್ಲಿನ ಕೇಂದ್ರ ಬ್ಯಾಂಕ್ ಶೇ 0.50 ಬಡ್ಡಿ ದರ ಏರಿಕೆ ಮಾಡುವ ಅವಕಾಶಗಳಿವೆ. ಇದರಿಂದ ಈಕ್ವಿಟಿ ಮಾರುಕಟ್ಟೆಗೆ ಪೆಟ್ಟು ಬೀಳುವ ಅವಕಾಶಗಳಿವೆ. ಜತೆಗೆ ಜಾಗತಿಕ ಬೆಳವಣಿಗೆಗೂ ಇದು ಒಳ್ಳೆ ಸುದ್ದಿ ಅಲ್ಲ. ಅಮೆರಿಕ ಮಾರುಕಟ್ಟೆ ಸ್ಥಿರವಾದ ಮೇಲಷ್ಟೇ ಭಾರತದ ಮಾರುಕಟ್ಟೆ ಸ್ಥಿರವಾಗಲು ಸಾಧ್ಯ. ಆದ್ದರಿಂದ ಮಾರುಕಟ್ಟೆ ಟ್ರೆಂಡ್ ಬಗ್ಗೆ ಸ್ಪಷ್ಟತೆ ದೊರೆಯಬೇಕು ಎಂದಾದಲ್ಲಿ ಹೂಡಿಕೆದಾರರು ಇನ್ನಷ್ಟು ಸಮಯ ಕಾಯಬೇಕಾಗುತ್ತದೆ. ಈ ಸುದ್ದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 1529.99 ಪಾಯಿಂಟ್ಸ್ ಅಥವಾ ಶೇ 2.82 ಹಾಗೂ ನಿಫ್ಟಿ 444 ಅಥವಾ ಶೇ 2.74ರಷ್ಟು ಕುಸಿದು 15,757 ಪಾಯಿಂಟ್ಸ್​ನಲ್ಲಿ ವಹಿವಾಟು ನಡೆಸುತ್ತಿದ್ದವು.

Edited By : Nagaraj Tulugeri
PublicNext

PublicNext

13/06/2022 03:17 pm

Cinque Terre

17.52 K

Cinque Terre

1