ನವದೆಹಲಿ: ನೀವು ಸಹ ಯುಪಿಐ ಪಾವತಿ ಬಳಸುತ್ತಿದ್ದಲ್ಲಿ ಇಲ್ಲಿ ನಿಮಗಿದೆ ಶುಭ ಸುದ್ದಿ. ಹೌದು, ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಎಂಬುದು ಸಾಮಾನ್ಯವಾಗಿ ಬಳಸುವ ಡಿಜಿಟಲ್ ಪಾವತಿ ವಿಧಾನವಾಗಿದೆ. ಈ ಮೂಲಕ ನೀವು ಹಣವನ್ನು ಪಾವತಿ ಮಾಡಬಹುದಾಗಿದೆ.
ಆದರೆ ಅನೇಕ ಬಾರಿ ಯುಪಿಐ ಬಳಕೆದಾರರು ಪಾವತಿಯ ವೈಫಲ್ಯದಿಂದ ಅಸಮಾಧಾನಗೊಳ್ಳುತ್ತಾರೆ. ಇದಕ್ಕೆ ಯುಪಿಐ ಸರಳ ಪರಿಹಾರ ಒದಗಿಸಿದೆ. ಅಂದ ಹಾಗೇ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಥವಾ ಎನ್‌ಪಿಸಿಐ, ಯುಪಿಐಗಾಗಿ ನೈಜ-ಸಮಯದ ಪಾವತಿ ತೊಡಕು ಪರಿಹಾರ ವ್ಯವಸ್ಥೆಯನ್ನು ಸಿದ್ಧಪಡಿಸುತ್ತಿದೆ.
ಐಎಂಎಫ್-ಸಿಂಗಾಪುರ್ ಪ್ರಾದೇಶಿಕ ತರಬೇತಿ ಸಂಸ್ಥೆಯ ವರ್ಚುವಲ್ ಸಮ್ಮೇಳನದಲ್ಲಿ ಮಾತನಾಡಿದ 'ಎನ್‌ಪಿಸಿಐನ ಎಂಡಿ ಮತ್ತು ಸಿಇಒ ದಿಲೀಪ್ ಅಸ್ಬೆ ಅವರು ಸೆಪ್ಟೆಂಬರ್ 2022ರ ವೇಳೆಗೆ ಈ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ, ಯುಪಿಐನಲ್ಲಿನ ಶೇಕಡಾ 80-90 ರಷ್ಟು ಸಮಸ್ಯೆಗಳನ್ನು ಆನ್‌ಲೈನ್‌ನಲ್ಲಿ ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ.
PublicNext
06/06/2022 10:59 pm