ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ತಮ್ಮ ಟೆಸ್ಲಾ ಕಂಪನಿಯ ಉದ್ಯೋಗಿಗಳಿಗೆ ಸಖತ್ ಶಾಕ್ ಕೊಟ್ಟಿದ್ದಾರೆ. ಈ ಶಾಕ್ ಕೇಳಿದವರು ಇನ್ಮುಂದೆ ಎಂದೂ ವರ್ಕ್ ಫ್ರಂ ಹೋಂ ಅಂತ ಹೇಳಲೇಬಾರದು.ಹಾಗಿದೆ ಎಲಾನ್ ಮಸ್ಕ್ ಹಾಕಿರೋ ಆವಾಜ್.
ಕೊರೊನಾ ಟೈಮ್ ನಲ್ಲಿ ಬಹುತೇಕ ಕಂಪನಿಯ ಉದ್ಯೋಗಿಗಳು ವರ್ಕ್ ಫ್ರಂ ಹೋಂ ಮಾಡಿದ್ದಾರೆ. ಅದರಂತೆ ಟೆಸ್ಲಾ ಕಂಪನಿಯ ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸಿದ್ದಾರೆ.
ಆದರೆ, ಸದ್ಯ ಕೊರೊನಾ ಕಾಟ ತಗ್ಗಿದೆ. ಮನೆಯಿಂದಲೇ ಕೆಲಸ ಮಾಡೋ ಅನಿವಾರ್ಯತೆ ಇಲ್ಲವೇ ಇಲ್ಲ.ಅದಕ್ಕೇನೆ ಟೆಸ್ಲಾ ಕಂಪನಿಯ ಓನರ್ ಎಲಾನ್ ಮಸ್ಕಾ ತಮ್ ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡಿ ಅಂತ ಹೇಳಿದ್ದಾರೆ.
ಇಲ್ಲ ನಾವು ಮನೆಯಿಂದಲೇ ಕೆಲಸ ಮಾಡ್ತೀವಿ ಅಂತ ಹೇಳಿದವ್ರಿಗೆ ನೀವೂ ಬರಲೇ ಬೇಡಿ. ಬಂದ್ರೆ ಕಚೇರಿಗೆ ಬನ್ನಿ. ಇಲ್ಲವೇ ಮನೆಯಲ್ಲಿ ಇದ್ದು ಬಿಡಿ ಅಂತಲೇ ಎಚ್ಚರಿಕೆ ಕೊಟ್ಟಿದ್ದಾರೆ. ಅದು ಈಗ ಭಾರಿ ಸುದ್ದಿ ಆಗ್ತಾಯಿದೆ.
PublicNext
01/06/2022 08:18 pm