ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ ಷೇರುಪೇಟೆ ಮಹಾಪತನ-1000 ಅಂಕಕ್ಕೆ ಕುಸಿದ ಸೂಚ್ಯಂಕ !

ಮುಂಬೈ: ಷೇರು ಮಾರುಕಟ್ಟೆಯ ಸೂಚ್ಯಂಕ ಮಹಾಪತನ ಕಂಡಿದೆ. ಷೇರು ಖರೀದಿಯಲ್ಲಿ ಹೂಡಿಕೆ ದಾರರು ಅಷ್ಟೇನೂ ಆಸಕ್ತಿ ತೋರಿಲ್ಲ. ಈ ಕಾರಣಕ್ಕೇನೆ ಈಗ 1000 ಕ್ಕೂ ಅಧಿಕ ಅಂಕಗಳಿಗೆ ಸೂಚ್ಯಂಕ ಕುಸಿದು ಹೋಗಿದೆ.

ಹೂಡಿಕೆ ದಾರರು ಷೇರು ಖರೀದಿಗೆ ಆಸಕ್ತಿ ತೋರದೇ ಇರಲು ಬಲವಾದ ಕಾರಣವೂ ಇದೆ. ಏಪ್ರಿಲ್ ತಿಂಗಳ ಹಣದುಬ್ಬರ ಹಾಗೂ ಮಾರ್ಚ್‌ ತಿಂಗಳ ಕೈಗಾರಿಕಾ ಉತ್ಪಾದನಾ ಅಂಕಿ-ಅಂಶ ಇನ್ನೂ ಘೋಷಣೆ ಆಗಿಲ್ಲ. ಹಾಗಾಗಿಯೇ ಅದಕ್ಕೂ ಮುನ್ನವೇ ಹೂಡಿಕೆದಾರರು ಷೇರು ಖರೀದಿಗೆ ಅಷ್ಟೇನು ಇಂಟ್ರಸ್ಟ್ ತೆಗೆದುಕೊಳ್ಳುತ್ತಿಲ್ಲ.

ಹೀಗಾಗಿಯೇ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 1,158.8 ಅಂಕಗಳಷ್ಟು ಕುಸಿತವಾಗಿದೆ. 52,930.31 ಅಂಕಗಳೊಂದಿಗೆ ದಿನದ ವಹಿವಾಟು ಅಂತ್ಯಗೊಂಡಿದೆ.

Edited By :
PublicNext

PublicNext

12/05/2022 06:37 pm

Cinque Terre

28.44 K

Cinque Terre

0

ಸಂಬಂಧಿತ ಸುದ್ದಿ