ನವದೆಹಲಿ: ಉದ್ಯಮಿ ಗೌತಮ್ ಅದಾನಿ ಈಗ ವಿಶ್ವದ 6 ನೇ ಶ್ರೀಮಂತ ಆಗಿದ್ದಾರೆ. ಇವರ ಕಂಪನಿಯ ಷೇರುಗಳ ಗಗನಕ್ಕೇರಿವೆ. ಇವರ ಆಸ್ತಿ ಕೂಡ ಮಿಲಿಯನ್ ಅಲ್ಲ ಬಿಲಿಯನ್ ಗಟ್ಟಲೆ ಇದೆ.
ಅದಾನಿ ಸಮೂಹ ಸಂಸ್ಥೆ ಸಂಸ್ಥಾಪಕ ಹಾಗೂ ಅಧ್ಯಕ್ಷ ಗೌತಮ್ ಅದಾನಿ,ಗಣಿಗಾರಿಕೆ,ಇಂಧನ, ಬಂದರು ಇನ್ನಿತರ ಉದ್ಯಮದಲ್ಲೂ ತೊಡಗಿಕೊಂಡಿದ್ದಾರೆ. ಇವರ ಈ ಸಂಸ್ಥೆಯ ಷೇರುಗಳು ಟಾಪ್ ಅಲ್ಲಿಯೇ ಇವೆ. ಇದರಿಂದ ಅದಾನಿ ಒಟ್ಟು ಆಸ್ತಿ ಮೌಲ್ಯ 118 ಬಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಿದೆ.
ಈ ಒಂದು ಏರಿಕೆಯಿಂದಲೇ ಗೌತಮ್ ಅದಾನಿ ಈಗ ಗೌತಮ್ ಅದಾನಿ ವಿಶ್ವದ 6ನೇ ಶ್ರೀಮಂತರಾಗಿ ಗುರುತಿಸಿಕೊಂಡಿದ್ದಾರೆ.ಈ ಮೂಲಕ ರಿಲಾಯನ್ಸ್ ಕಂಪನಿಯ ಮುಖ್ಯಸ್ಥ ಮುಖೇಶ್ ಅಂಬಾನಿ,ಗೂಗಲ್ ಸಂಸ್ಥಾಪಕ ಲ್ಯಾರಿ ಪೇಜ್ ಅವರನ್ನೂ ಗೌತಮ್ ಅದಾನಿ ಹಿಂದಿಕ್ಕಿದ್ದಾರೆ.
PublicNext
13/04/2022 04:22 pm