ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್, ಹಲಾಲ್ ಆಯ್ತು ಈಗ ಮ್ಯಾಂಗೋ ವಾರ್ : ಮುಸಲ್ಮಾನರಿಗೆ ಮಾವು ಮಾರಾಟ ಬೇಡ

ಹಾಸನ : ರಾಜ್ಯದಲ್ಲಿ ಹಿಜಾಬ್,ಹಲಾಲ್,ಆಜಾನ್ ಈಗಾ ಮ್ಯಾಂಗೋ ಸಮರ ಶುರುವಾಗಿದೆ. ಹೌದು ಹಾಸನ ಜಿಲ್ಲೆಯಲ್ಲಿ ಮುಸಲ್ಮಾನರಿಗೆ ಮಾವು ಬೆಳೆ ಮಾರಟ ಮಾಡದಂತೆ ಅಭಿಯಾನವೊಂದು ಆರಂಭವಾಗಿದೆ. ಹೌದು ಜಿಲ್ಲೆಯಲ್ಲಿ ವಾಟ್ಸಾಪ್ ಅಭಿಯಾನ ಶುರವಾಗಿದ್ದು ಅಲ್ಲಿ ಮಾವು ಬೆಳಯನ್ನ ಮುಸಲ್ಮಾನರಿಂದ ಕೈಬಿಟ್ಟು ಹಿಂದೂಗಳೆ ಖರೀದಿ ಮಾಡಬೇಕು ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ದೇಶದಲ್ಲಿ ಹಣ್ಣುಗಳಿಗೆ ಕೆಮಿಕಲ್ ಉಪಯೋಗಿಸೋದನ್ನ ನಾವು ನೋಡಿದ್ದೇವೆ. ಹಣ್ಣಿನಲ್ಲೂ ಮೋಸ ಮಾಡೋದು ನಡೆಯುತ್ತೆ, ನಮ್ಮಲ್ಲೂ ವ್ಯಾಪಾರಕ್ಕೆ ಕೆಲವರು ಮೋಸಮಾಡುತ್ತಾರೆ ಆದ್ರೆ ಮುಸ್ಲಿಂಮರು ಹಿಂದುಗಳಿಗೆ ವ್ಯತಿರಿಕ್ತ ಸಮಸ್ಯೆ ಆಗಲೆಂದೇ ಹಣ್ಣುಗಳಿಗೆ ಕೆಮಿಲಕ್ ಬಳಸುತ್ತಾರೆ. ಮಕ್ಕಳಾಗದಂತೆ ಹಣ್ಣಿನೊಳಗೆ ಔಷದಿ ಸೇರಿಸುತ್ತಾರೆ ಎಂದು ಹಾಸನದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ರಕ್ಷಿತ್ ಭಾರದ್ವಜ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಶುರುವಾಗಿರೋ ಮಾವು ಅಭಿಯಾನಕ್ಕೆ ಧ್ವನಿಗೂಡಿಸಿದ ಧಾರ್ಮಿಕ ಪರಿಷತ್ ಸದಸ್ಯ ಎಲ್ಲಾ ದೃಷ್ಟಿಯಿಂದ ಅನಾರೋಗ್ಯ ಕರ ಹಣ್ಣು ಮಾರಾಟ ತಡೆಯಲು ಮುಂದಾಗಬೇಕು ಹಾಗಾಗಿ ಹಿಂದುಗಳೇ ಈ ಕೆಲಸದಲ್ಲಿ ತೊಡಗಬೇಕು ಇದರಿಂದ ನಿರುದ್ಯೋಗ ಸಹ ಕಡಿಮೆಯಾಗುತ್ತೆ ಎಂದಿದ್ದಾರೆ.

Edited By : Nirmala Aralikatti
PublicNext

PublicNext

05/04/2022 08:34 pm

Cinque Terre

76.14 K

Cinque Terre

51