ಬೆಂಗಳೂರು: ಎಣ್ಣೆ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್. ಎಣ್ಣೆ ಬೇಕು ಅಂತ ಬಾರ್‌ಗೆ ಹೋದ್ರೆ ಅಲ್ಲಿ ನಿಮಗೆ
ಎಣ್ಣೆನೆ ಸಿಗೋದಿಲ್ಲ. ರಾಜ್ಯದಲ್ಲಿ ಎಲ್ಲೆಡೆಯ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳಲ್ಲಿ ಎಣ್ಣೆ ಖಾಲಿ ಆಗಿ ಬಿಟ್ಟಿದೆ.
ರಾಜ್ಯದ ಎಣ್ಣೆ ಅಂಗಡಿಗಳಲ್ಲಿ ನಿನ್ನೆಯಿಂದಲೇ ಮದ್ಯದ ಸ್ಟಾಕ್ ಖಾಲಿ ಆಗಿದೆ. ಇದರಿಂದ ಇಂದು ಸಂಜೆ ವೇಳೆಗೆ ಬಹುತೇಕ ರಾಜ್ಯದ ಬಾರ್ ಆ್ಯಂಡ್ ರೆಸ್ಟೋರೆಂಟರ್ ಗಳಲ್ಲಿ ಎಣ್ಣೆ ಸಿಗೋದೇ ಇಲ್ಲ.
ಕೆಎಸ್‌ಬಿಸಿಎಲ್ ನ ಬಿಲ್ಲಿಂಗ್ ನೂತನ ಸಾಫ್ಟ್ ವೇರ್ ಅಪ್‌ಡೇಟ್ ಆಗಿದೆ. ಈ ಹಿನ್ನೆಲೆಯಲ್ಲಿಯೇ ಬಿಲ್ ಮಾಡಲು ಆಗುತ್ತಿಲ್ಲ. ಇದರಿಂದ ಸಮರ್ಪಕ ಮದ್ಯ ಪೂರೈಕೆ ಕೂಡ ಆಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
PublicNext
05/04/2022 04:14 pm