ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ರಿಟೇಲ್ ಮಾರುಕಟ್ಟೆ ಕೂಡ ತತ್ತರಿಸುತ್ತಿದೆ. ಇದರಿಂದ ಹಣದುಬ್ಬರವೂ ಹೆಚ್ಚಾಗಿದ್ದು ದಿನ ಬಳಕೆಯ ವಸ್ತುಗಳ ದರವೂ ಗಗನಕ್ಕೇರುತ್ತಿವೆ.ಅದರಲ್ಲೂ ದೊಡ್ಡ ದೊಡ್ಡ ಕಂಪನಿಗಳೆಲ್ಲ ಹೊಸ ದರವನ್ನ ಜಾರಿಗೊಳಿಸಿ ಬಿಟ್ಟಿವೆ.
ಹೌದು. ಈ ಹಣದುಬ್ಬರದಿಂದಲೇ ನೆಸ್ಲೆ ,ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಕಂಪನಿಗಳು ದೈನಂದಿನ ವಿವಿಧ ಸರಕುಗಳ ಬೆಲೆ ಹೆಚ್ಚಿಸಿವೆ.
ಬ್ರೂ ಕಾಫಿಯ ಬೆಲೆ ಶೇಕಡ 3 ರಿಂದ 7 ರಷ್ಟು ಏರಿಕೆ ಆಗಿದೆ. ತಾಜ್ ಮಹಲ್ ಚಹಾದ ಬೆಲೆ 3.7 ರಿಂದ 5.8 ಕ್ಕೆ ಏರಿದೆ. ನೆಸ್ಲೆ ಮ್ಯಾಗಿ ಬೆಲೆ ಹೆಚ್ಚಿಸಿದೆ. 70 ಗ್ರಾಂ ಮ್ಯಾಗಿ ಬೆಲೆ 12 ರಿಂದ 14 ರೂಪಾಯಿಗೆ ಏರಿಕೆ ಆಗಿದೆ.
PublicNext
15/03/2022 09:20 pm