ವಾಷಿಂಗ್ಟನ್: ಸಂಯುಕ್ತ ಅರಬ್ ಒಕ್ಕೂಟ ತೈಲ ಉತ್ಪಾದನೆ ಹೆಚ್ಚಿಸುವುದಾಗಿ ಹೇಳಿದೆ. ಇದರ ಬೆನ್ನಲ್ಲಿಯೇ ಈಗ ಕಚ್ಚಾ ತೈಲದ ಬೆಲೆ ಭಾರೀ ಇಳಿಕೆ ಕಂಡಿದೆ.
ಬ್ರೇಂಟ್ ಕಚ್ಚಾ ತೈಲ ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಶೇಕಡ 12 ರಷ್ಟು ಕಚ್ಚಾ ತೈಲ ದರ ಇಳಿಕೆ ಕಂಡಿದ್ದು, ಸುಮಾರು 8,549 ರೂಪಾಯಿಗೆ ಇಳಿಕೆ ಆಗಿದೆ.
ಆದರೆ, ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ಬ್ರೇಂಟ್ ಕಚ್ಚಾ ತೈಲ ಬೆಲೆ ಗಗನಕ್ಕೇರಿತ್ತು.ಸೋಮವಾರ ಒಂದು ಬ್ಯಾರಲ್ ಗೆ 10,006 ರೂಪಾಯಿಗೆ ಏರಿಕೆ ಆಗಿತ್ತು.
ಈ ಕಾರಣದಿಂದಲೇ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಇತರ ನಾಯಕರ ಜೊತೆಗೆ ಸಭೆ ನಡೆಸಿದರು. ತೈಲ ಉತ್ಪಾದನೆ ಹೆಚ್ಚಿಸುವಂತೆ ಅರಬ್ ರಾಷ್ಟ್ರಗಳ ಜೊತೆಗೆ ಮಾತುಕತೆ ಮಾಡಿದ್ದಾರೆ. ಈ ಕಾರಣಕ್ಕೆ ಕಚ್ಚಾ ತೈಲ ಬೆಲೆ ಇಳಿಕೆ ಕಂಡಿದೆ ಅಂತಲೇ ಹೇಳಬಹುದು.
PublicNext
10/03/2022 11:10 am