ನವದೆಹಲಿ: ದೇಶದಲ್ಲಿ ಈಗ ಚಲಾವಣೆಯಲ್ಲಿರುವ ಹಳೆಯ 100, 10, ಮತ್ತು 5 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸುವ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಚಿಂತನೆ ನಡೆಸಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ಸುದ್ದಿ ಸುಳ್ಳು ಈ ಕುರಿತು ಇದುವರೆಗೂ ಆರ್ ಬಿಐ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.
100 ರೂಪಾಯಿ ಹಳೆಯನೋಟುಗಳ ಚಲಾವಣೆ ಸ್ಥಗಿತಗೊಳಿಸಿ ಹೊಸ ಸೀರಿಸ್ ನ ನೋಟುಗಳನ್ನು ಚಲಾವಣೆಗೆ ತರಲಾಗುವುದು. ಹಾಗಾಗಿ ಹಳೆಯ ನೋಟುಗಳನ್ನು ಬ್ಯಾಂಕ್ ಗಳ ಮೂಲಕ ಹಿಂಪಡೆಯಲಾಗುತ್ತಿದೆ ಎಂದು ಪೋಸ್ಟ್ ನಲ್ಲಿ ಹೇಳಲಾಗುತ್ತಿದೆ.
2018ರಲ್ಲಿ ಹೊಸ 100 ರೂಪಾಯಿ ಮುಖಬೆಲೆಯ ನೋಟುಗಳು ಹೊಸ ಬಣ್ಣದಿಂದ ಚಲಾವಣೆಗೆ ಬಂದಿದೆ. ಈ ನೋಟುಗಳ ಜೊತೆಗೆ ಹಳೆಯ ಮುಖ ಬೆಲೆಯ ನೋಟುಗಳು ಮುಂದುವರಿಯುತ್ತದೆ ಎಂದು ಆರ್ ಬಿಐ ತಿಳಿಸಿದೆ.
PublicNext
19/12/2021 08:55 pm