ಗುಹಾಟಿ:ಅಸ್ಸಾಂ ಮೂಲದ ಎಸ್ಟೇಟ್‌ನಲ್ಲಿ ಸಾಂಪ್ರದಾಯಕವಾಗಿ ಬೆಳೆದ ಒಂದು ಕೆಜಿ ಟೀ ಪುಡಿ ಬರೋಬ್ಬರಿ 99,999 ರೂಪಾಯಿಗೆ ಸೇಲ್ ಆಗಿ ಭಾರೀ ದಾಖಲೆ ಮಾಡಿದೆ.
ಟೀ ಎಲೆಗಳ ಬದಲು ಟೀ ಮೊಗ್ಗಿನಿಂದಲೇ ತಯಾರಿಸಲ್ಪಡುವ ಗೋಲ್ಡನ್ ಟಿಪ್ ಟೀ ಪುಡಿನೇ ಈಗ ದಾಖಲೆ ಮಾಡಿರೋ ವಿಶೇಷ ಟೀ ಎನಿಸಿಕೊಂಡಿದೆ.
ಇದರ ತಯಾರಿಕೆ ಅಷ್ಟು ಸರಳ ಅಲ್ಲ ಬಿಡಿ.ಕಷ್ಟಕರವಾಗಿಯೇ ಇದೆ. ಇದೇ ಟೀ ಪುಡಿನೇ 99,999 ರೂಪಾಯಿಗೆ ಹರಾಜಾಗಿದೆ. ದೇಶದಲ್ಲಿಯೇ ಇಷ್ಟು ಬೆಲೆಗೆ ಮಾರಾಟವಾದ ಚಹಾ ಪುಡಿ ಇದಾಗಿದೆ.
ಕಳೆದ ವರ್ಷ ಮನೋಹರಿ ಗೋಲ್ಡ್ ಟೀ ಪುಡಿ 75 ಸಾವಿರಕ್ಕೆ ಈ ಟೀ ಪುಡಿ ಮಾರಾಟ ಆಗಿತ್ತು.ಆದರೆ ಈ ಸಲ ದುಬಾರಿ ಬೆಲೆಗೆ ಸೇಲ್ ಆಗಿ ದಾಖಲೆ ಮಾಡಿದೆ.
PublicNext
15/12/2021 03:30 pm